ಗೋಕಾಕ : ಸದೃಡ ಶರೀರ ಎಲ್ಲಿ ಇರುತ್ತದೆಯೋ ಅಲ್ಲಿ ಮನಸ್ಸು ಕೂಡ ಸದೃಡವಾಗಿರುತ್ತದೆ.
ವಿದ್ಯಾರ್ಥಿಗಳು ಇತ್ತೀಚಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಆಟದಿಂದ ವಿಮುಕ್ತಿ ಹೊಂದುತಿದ್ದಾರೆ ಅದಕ್ಕೆ ಕಾರಣ ಶಿಕ್ಷಕರು ಎಂದು ಗೋಕಾಕ ತಾಲೂಕಿನ ಕೊಣ್ಣೂರ ಸರಕಾರಿ ಶಾಲೆಯಲ್ಲಿ ನಡೆದ ಕೇಂದ್ರ ಮತ್ತು ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಜಿ,ಬಿ,ಬಳಗಾರ ಇವರು ಮಾತನಾಡಿದರು.
ಮಕ್ಕಳು ಪ್ರತಿಯೊಂದು ಆಟದಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು.ಕ್ರೀಡೆಯಲ್ಲಿ ಸೋಲು ಗೆಲುವು ಸಮನಾಗಿ ಸ್ವೀಕರಿಸಿ ಉತ್ತಮ ಪ್ರದರ್ಶನ ತೋರಿ ತಮ್ಮ ನೈಜ ಪ್ರತಿಭೆ ಹೊರ ಹೊಮ್ಮಿಸಿ ಜನಮನ್ನಣೆ ಗಳಿಸಬೇಕು.ಮಕ್ಕಳು ಸೋಲೆ ಗೆಲುವಿನ ಮೆಟ್ಟಿಲು ಎಂದು ಭಾವಿಸಿ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು.
ಅದರಂತೆ ಗ್ರಾಮೀಣ ಮಟ್ಟದಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯವಾಗಿದೆ ,ಅದಕ್ಕೆ ಶಿಕ್ಷಕರ ಜೊತೆಯಲ್ಲಿ ಪಾಲಕರು ಕೂಡ ಮಕ್ಕಳಿಗೆ ಪ್ರೋತ್ಸಾಹಿಸಿದರೆ ಮಾತ್ರ ಮಕ್ಕಳ ಭವಿಷ್ಯ ಉಜ್ವಲ ಆಗಲು ಸಾದ್ಯ ಎಂದರು.
ಇನ್ನು ಶಾಲಾ ಮುಖ್ಯೋಪಾದ್ಯಾಯರಾದ ಸುರೇಶ ಕಲ್ಲಟ್ಟಿ ಇವರು ನಿರ್ಣಾಯಕರು ನಿರ್ಣಯದಲ್ಲಿ ಯಾವ ತಾರತಮ್ಯ ಮಾಡದಂತೆ ಪಾರದರ್ಶಕವಾಗಿ ನೋಡಿಕೊಂಡು ನಿಜವಾದ ಪ್ರತಿಬೆಯನ್ನು ಪತ್ತೆಹಚ್ಚುಕಾರ್ಯ ಮಾಡಬೇಕೆಂದರು.
ಇನ್ನು ಪುರಸಭೆ ಅದ್ಯಕ್ಷ ವಿನೋದ ಕರನಿಂಗ ಮತ್ತು ಪ್ರಕಾಶ ಕರನಿಂಗ ಇವರು ದ್ವಜಾರೋಹಣ ಮಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಇದೆ ಸಂದರ್ಭದಲ್ಲಿ ಬಿಇಓ ಬಳಗಾರ ಇವರು ಗುಂಡು ಎಸೆದು ಕ್ರೀಡೆಗೆ ಚಾಲನೆ ನೀಡಿದರು.ಅದರಂತೆ ಸ್ಥಳಿಯ ಸರಕಾರಿ ಶಾಲೆಯ ದೈಹಿಕ ಶಿಕ್ಷಕಿ ಬೊರ್ಝಿ ಇವರು ಪ್ರಮಾಣ ವಚನ ಬೋದಿಸಿದರು.
ನಂತರ ಕ್ರೀಡಾಕೂಟಕ್ಕೆ ಆಗಮಿಸಿದ ಗಣ್ಯಮಾನ್ಯರಿಗೆ ಶಿಕ್ಷಕರು ಸತ್ಕರಿಸಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ,ಸಮನ್ವಯ ಸಂಪನ್ಮೂಲ ವ್ಯಕ್ತಿಗಳಾದ ಬಿ,ಎಚ್,ಪಿರಜಾದೆ, ಸರಕಾರಿ ಶಿಕ್ಷಕರ ತಾಲೂಕಾ ಸಂಘದ ಅದ್ಯಕ್ಷ ,ಬಾಗೆನ್ನವರ, ಪ್ರೀಯದರ್ಶನಿ ಜಾದವ, ದೈಹಿಕ ಶಿಕ್ಷಕರಾದ ಸಂಜಯ ನಾಯಕ, ಶ್ರೀಶೈಲ ಶಿವನಗುತ್ತಿ, ಮುತ್ನಾಳ, ಹಾದಿಮಿನ, ರೇಖಾ ಪೂಜೇರಿ,ಅಂಕಿತಾ ಸೇರಿಂದಂತೆ ಇನ್ನುಳಿದವರು ಉಪಸ್ಥಿತರಿದ್ದರು.
ವರದಿ : ಮನೋಹರ ಮೇಗೇರಿ




