ಚಿಕ್ಕೋಡಿ : ಹೊಸ ಶೈಕ್ಷಣಿಕ ಪ್ರಯಾಣದ ಆರಂಭವನ್ನು ಮಾತ್ರವಲ್ಲದೆ, ನಿಮ್ಮ ಭವಿಷ್ಯವನ್ನು ರೂಪಿಸುವ ಸ್ನೇಹ, ಅನುಭವಗಳು ಮತ್ತು ಅವಕಾಶಗಳ ಆರಂಭವನ್ನು ಸಹ ಸೂಚಿಸುತ್ತದೆ.
ನೀವು ಈಗ ಶ್ರೇಷ್ಠತೆ, ಶಿಸ್ತು ಮತ್ತು ಸಮಗ್ರ ಅಭಿವೃದ್ಧಿಯ ಶ್ರೀಮಂತ ಸಂಪ್ರದಾಯವನ್ನು ಹೊಂದಿರುವ ಸಂಸ್ಥೆಯ ಭಾಗವಾಗಿದ್ದೀರಿ. ಇದು ನೀವು ಪುಸ್ತಕಗಳಿಂದ ಮಾತ್ರವಲ್ಲದೆ ಜೀವನದಿಂದಲೇ ಕಲಿಯುವ ಸ್ಥಳವಾಗಿದೆ. ಜೀವನದಲ್ಲಿ ಸಾಧನೆ ಮಾಡಬೇಕಾದರೆ ಪರಿಶ್ರಮ ಮಾಡಬೇಕು ತಂದೆ ತಾಯಿಗೆ ಗೌರವ ತರುವಂತೆ ವಿದ್ಯಾರ್ಥಿಗಳು ತಂದೆ ತಾಯಿಗಳು ತಮ್ಮ ಬಡತನವನ್ನು ಮಕ್ಕಳಿಗೆ ತಿಳಿಸದೆ ಮಕ್ಕಳಿಗೆ ಎಲ್ಲ ರೀತಿಯ ಸವಲತ್ತು ನೀಡುತ್ತಾರೆ ಅಂತ ತಂದೆ ತಾಯಿಗೆ ವಿದ್ಯಾರ್ಥಿಗಳು ಮೋಸ ಮಾಡಬಾರದು ಮೊಬೈಲಗಳನ್ನು ಬಳಸಬಾರದು.
ಉತ್ತಮ ವ್ಯಕ್ತಿಗಳಾಗಬೇಕು ಎಪಿಜೆ ಅಬ್ದುಲ್ ಕಲಾಂ ಜೀವನ ಚರಿತ್ರೆ ಬಗ್ಗೆ ಕಾರ್ಯಕ್ರಮದ ಉದ್ದೇಶಿಸಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ವಿ ಪಿ ಚೌಗುಲೆ ಸಹ ಶಿಕ್ಷಕಿ ಸದಲಗಾ ಪ್ರೌಢಶಾಲೆ ಸದಲಗಾ ಇವರು ಸದಲಗಾ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ 2025 /26 ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ವಾರ್ಷಿಕ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಸಾಧನ ಪರ್ವ ಎಂಬ ಕಾರ್ಯಕ್ರಮಕ್ಕೆ ಬಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಅದೇ ರೀತಿಯಾಗಿ ಇಂದಿನ ವಿದ್ಯಾರ್ಥಿಗಳ ನಾಳಿನ ಪ್ರಜೆಗಳು ಈಗಿನ ದಿನಮಾನಗಳಲ್ಲಿ ಸ್ಪರ್ಧಾತ್ಮಕ ಬಹಳ ಇರುವುದರಿಂದ ಎಲ್ಲ ವಿದ್ಯಾರ್ಥಿಗಳು ಅತ್ಯುತ್ತಮವಾಗಿ ಅಭ್ಯಾಸ ಮಾಡಬೇಕು ದಿನನಿತ್ಯ ಪಾಠದ ಕಡೆ ಗಮನ ನೀಡಬೇಕು ಎಂದು ಅಧ್ಯಕ್ಷತೆಯನ್ನು ಡಾ.ರಾವಸಾಹೇಬ್ ಜೆ ಪಾಟೀಲ್ ಕಾರ್ಯದರ್ಶಿ ಸ ಶಿ ಸಂ ಸದಲಗಾ ಇವರು ತಿಳಿಸಿದರು.
ಉಪಸ್ಥಿತಿಯಲ್ಲಿ ಪ್ರಕಾಶ್ ಜೆ ಪಾಟೀಲ್ ಅಧ್ಯಕ್ಷರು ಸದಲಗಾ ಶಿಕ್ಷಣ ಸಂಸ್ಥೆ ಸದಲಗಾ, ಎ ಎಸ್ ಉಗಾರೆ ನಿರ್ದೇಶಕರು ಶ್ರೀಮತಿ ಡಾಕ್ಟರ್ ಜೆ ಆರ್ ಚಿಂಚಣಿಕರ್ ನಿರ್ದೇಶಕರು, ಆರ್ ಎ ಮಾನೆ ಎಸ್ ಎ ಲಡಗಿ ಬಿಸಿ ಪಾಟೀಲ್ ಎಸ್ ಎಸ್ ಕೋರೆ ಎಸ್ ಎಸ್ ಕೋರೆ ಸಿದ್ದಾಂತ ಬನಜವಾಡ್ ಪ್ರಾಚಾರ್ಯರು ಇವರೆಲ್ಲರೊಂದಿಗೆ ಕಾರ್ಯಕ್ರಮಕ್ಕೆ ಉಪಸ್ಥಿತಿಯಲ್ಲಿ ಪ್ರೊಫೆಸರ್ ಪೂಜಾ ಬೆಳಸ್ಕರ್ ,ಲಗಮಣ್ಣ ಗಂಗಾಯಿ, ಉಮಾಕಾಂತ್ ಜಂಗಮ, ಸ್ವಾತಿ ಬಾದುರವಾಡೆ, ಚೇತನಾ ಮಾಲಗತ್ತೆ ,ಅಹಮದ್ ,ಪದ್ಮಶ್ರೀ ಗಣೆ ,ಧೀರಜ್ ಸಾಳುಂಕೆ, ಪರಶುರಾಮ್ ಐವಾಳೆ ವರ್ಗದ ಪ್ರತಿನಿಧಿಗಳಾಗಿ ಕು ಮೇಹತಾಬ್ ಜಮಾಧಾರ್ ,ತನವಿ ತಿನೆಕರ್, ಆದಿತಿ ಶಿತೊಳೆ , ಕೀರ್ತಿ ಕೋಳಿ, ದಿಶಾ ವಾಲಿ, ಯಲ್ಲವ್ವ ಹಮ್ಮನ್ನವರ್, ಅದೇ ರೀತಿಯಾಗಿ ಸಾಂಸ್ಕೃತಿ ವಿಭಾಗದ ಅಧ್ಯಕ್ಷರಾದ ಪ್ರೊಫೆಸರ್ ಸಂಭಾಜಿ ಶಿಂಧೆ ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿ ಕುಮಾರ್, ಗುರುರಾಜ್ ಮಾನೆ ,ಕ್ರೀಡಾ ವಿಭಾಗದ ಅಧ್ಯಕ್ಷರಾದ ಪ್ರೊಫೆಸರ್ ರಾಹುಲ್ ಭಜಂತ್ರಿ ಉಪಸಿತರಿದ್ದರು .
ಸ್ವಾಗತ ಪೂಜಾ ಕಂಕನವಾಡಿ ಮತ್ತು ಪ್ರಸ್ತಾವನೆ ಶ್ರೇಯಾ ತೋರಸ್ಕರ್ , ಅತಿಥಿ ಪರಿಚಯ ದಿಶಾ ವಾಲಿ ಜೊತೆಗೆ ವಿದ್ಯಾರ್ಥಿಗಳ ಅನಿಸಿಕೆ ಅನಿತಾ, ರುಕ್ಮಿಣಿ ,ಕವಿತಾ ಹೇಳಿದರು.ಯಲ್ಲವ್ವ ಹಮ್ಮನ್ನವರ್ ಸಾನಿಯಾ ಶೇಖ್
ನಿರೂಪಣೆ ಮಾಡಿದರು ಮತ್ತು ವಂದನಾರ್ಪಣೆ ರೋಹಿಣಿ ಕಾಂಬಳೆ ನೆರವೇರಿಸಿದರು.
ವರದಿ: ರಾಜು ಮುಂಡೆ




