ರಾಯಚೂರು : ಆಂಜನೇಯ ದೇವಸ್ಥಾನವನ್ನು ಕಟ್ಟಲು ಬಿಕ್ಷುಕ ಮಹಿಳೆಯೊಬ್ಬಳು 1.83 ಲಕ್ಷ ರೂಪಾಯಿ ಹಣ ನೀಡಿದ ಅಪರೂಪದ ಘಟನೆ ರಾಯಚೂರಿನಲ್ಲಿ ನಡೆದಿದೆ.
ರಾಯಚೂರು ತಾಲೂಕಿನ ಬಿಜನಗೇರಾ ಗ್ರಾಮದ 60 ವರ್ಷದ ರಂಗಮ್ಮ ಎಂಬುವವರು ಆಂಜನೇಯ ದೇವಸ್ಥಾನ ನಿರ್ಮಾಣಕ್ಕೆ 1.83 ಲಕ್ಷ ರೂಪಾಯಿಯನ್ನು ದೇಣಿಗೆ ನೀಡಿದ್ದು, ಎಲ್ಲರೂ ಬೆರಗಾಗುವಂತೆ ಮಾಡಿದ್ದಾರೆ.
ಸದ್ಯ ಆಂಜನೇಯ ಸ್ವಾಮಿ ದೇವಸ್ಥಾನ ಲೋಕಾರ್ಪಣೆಗೊಂಡಿದ್ದು, ಈ ಸಮಾರಂಭದಲ್ಲಿ ರಂಗಮ್ಮಗೆ ಸ್ಥಳೀಯರೆಲ್ಲ ಸೇರಿ ಸನ್ಮಾನ ಮಾಡಿ ಗೌರವ ಸಲ್ಲಿಸಿದ್ದಾರೆ.




