
ಪರೋಟಾ ಎಲ್ಲರ ಅಚ್ಚುಮೆಚ್ಚಿನ ತಿಂಡಿ ಎನ್ನುವದರಲ್ಲಿ ಎರಡು ಮಾತಿಲ್ಲ. ಸಾಕಷ್ಟು ಬಗೆಯ ಪರೋಟಾ ಗಳಿವೆ. ಆಲೂ ಪರೋಟಾ, ಎಗ್ ಪರೋಟಾ, ಸಬ್ ಸಬ್ಜಿ ಪರೋಟಾ, ಮೈದಾ ಪರೋಟಾ ಹೀಗೆ ಹತ್ತು, ಹಲವು ಬಗೆಯ ಪರೋಟಾಗಳಿವೆ.

ಪರೋಟಾಗಳಿಗೆ ಚಪಾತಿಯಂತೆ ಬಹಳಷ್ಟು ಸೈಡ್ ಡಿಶ್ ಗಳ ಅಗತ್ಯವಿಲ್ಲ. ಪ್ರಮುಖವಾಗಿ ಪರೋಟಾ ರುಚಿ ಸವಿಯಲು ಸೈಡ್ ಡಿಶ್ ಆಗಿ ಬೆಣ್ಣೆ, ಮೊಸರು, ಟೊಮಾಟಾ ಸಾಸ್, ಗ್ರೀನ್ ಚಟ್ನಿ ಹಾಗೂ ಉಪ್ಪಿನ ಕಾಯಿ ಬಳಸುತ್ತಾರೆ. ಪರೋಟಾ ತಿಂದ ಮೇಲೆ ಒಂದು ಸ್ಟ್ರಾಂಗ್ ಕಾಪಿ ಕುಡಿದರೆ ಅದರ ಮಜವೇ ಬೇರೆ.




