ಇದೇ ದಿನಾಂಕ 11ನೇ ತಾರೀಕು ಸೋಮವಾರದಿಂದ 5 ದಿನಗಳವರಿಗೆ ನಡೆಯುವ ವಿಶ್ವಗುರು ಬಸವೇಶ್ವರ ಜಾತ್ರೆಯನ್ನು ಶಾಂತರೀತಿಯಾಗಿ ಮತ್ತು ವಿಜೃಂಭಣೆಯಿಂದ ಆಚರಣೆಯನ್ನು ಮಾಡೋಣ ಅದಕ್ಕೆ ತಾಲೂಕಿನ ಸಮಸ್ತ ನಾಗರೀಕರು ಎಲ್ಲಾ ಅಧಿಕಾರಿ ವರ್ಗದವರು ಸಹಕರಿಸಬೇಕೆಂದು ಎಂದು ಜಾತ್ರಾ ಸಮಿತಿ ಹಿರಿಯ ಅಧ್ಯಕ್ಷರಾದ ಈರಣ್ಣ ಪಟ್ಟಣಶೆಟ್ಟಿ ಅವರು ಹೇಳಿದರು.

ಇದೇ ಸಂದರ್ಭದಲ್ಲಿ Dysp ಬಲ್ಲಪ್ಪ ನಂದಗಾವಿ ಆವರು ಮಾತನಾಡಿ ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಮ್ಮ ಪೊಲೀಸರು ಸದಾ ಜಾಗೃತರಾಗಿ ಕೆಲಸ ಮಾಡುತ್ತಾರೆ ಅದಕ್ಕೆ ಜಾತ್ರಾ ಕಮಿಟಿ ಸದಸ್ಯರು ಹಾಗೂ ಪಟ್ಟಣದ ಎಲ್ಲಾ ಸಾರ್ವಜನಿಕರು ಸಹಕಾರ ಕೊಡಬೇಕು ನಿಮಗೆ ಯಾವುದೇ ಅಹಿತಕರ ಘಟನೆ ಕಂಡುಬಂದರೆ ತಕ್ಷಣವೇ ನಮ್ಮ ಗಮನಕ್ಕೆ ತನ್ನಿ ನಾವು ಅದನ್ನು ಬಗೆಹರಿಸುತ್ತೆವೆ. ಜೊತೆಗೆ ಇಲಾಖೆ ಅಧಿಕಾರಿಗಳು ತಮ್ಮ ಕೆಲಸವನ್ನು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಸಭೆಯಲ್ಲಿ ಸಿಪಿಐ ಗುರುಶಾಂತಗೌಡ ದಾಸ್ಯಾಳ, ಪುರಸಭೆ ಮುಖ್ಯಧಿಕಾರಿ ವಿದ್ಯಾದರ ಜಾತ್ರೆ ಸಮಿತಿ ಅಧ್ಯಕ್ಷ ರವಿ ರಾಠೋಡ್, ಶಂಕರಗೌಡ ಬಿರಾದಾರ, ಸಂಗಮೇಶ್ ಓಲೇಕಾರ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ: ಕೃಷ್ಣಾ ಎಚ್. ರಾಠೋಡ




