ಬೆಂಗಳೂರು : ವೀರಾಂಜನೇಯ ಸ್ವಾಮಿಯು ಹಿಂದೂ ಧರ್ಮದಲ್ಲಿ ಪ್ರಮುಖ ದೇವರೆಂದು ಪರಿಗಣಿಸಲ್ಪಟ್ಟಿದ್ದು, ಭಗವಾನ್ ರಾಮನ ಪರಮ ಭಕ್ತ ಮತ್ತು ಶಕ್ತಿಯ ಸಂಕೇತವೆಂದು ಪೂಜಿಸಲಾಗುತ್ತದೆ. ಆತನನ್ನು ಪೂಜಿಸುವುದರಿಂದ ಧೈರ್ಯ, ಶಕ್ತಿ, ಜ್ಞಾನ ಮತ್ತು ಭಕ್ತಿಯು ಲಭಿಸುತ್ತದೆ ಎಂದು ಆರ್ ಎಂ ಸಿ ಯಾರ್ಡಿನ ವೀರಾಂಜನೇಯ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಹಾಗೂ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಬಜರಂಗದಳದ ಅಧ್ಯಕ್ಷ ಸೆಲ್ವರಾಜು ಹೇಳಿದರು.
ಅವರು ವೀರಾಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರಾವಣ ಮಾಸದ ಅಂಗವಾಗಿ ವೀರಾಂಜನೇಯ ಸ್ವಾಮಿಗೆ ವಿಶೇಷ ಪೂಜೆ ಪುನಸ್ಕಾರ ಸಲ್ಲಿಸಿ ನಮ್ಮ ದೇವಸ್ಥಾನ ‘ಚಿಕ್ಕದಾದರೂ ಕೀರ್ತಿ ದೊಡ್ಡದು’ ಎಂಬಂತೆ ಈ ಸ್ವಾಮಿ ಪಾವಡ , ಮಹಿಮೆ ಬಹಳದು ಕಷ್ಟ ಕಾರ್ಪಣ್ಯಗಳು ದೂರು ಮಾಡಿದ ನಿರ್ದೇಶನ ಇವೆ ಮತ್ತು ಮಕ್ಕಳು ಆಗದವರಿಗೆ ಮಕ್ಕಳ ಭಾಗ್ಯ ನೀಡಿದ ಇತಿಹಾಸವಿದೆ ಹೀಗೆ ಅನೇಕ ಸಕಲ ಸಂಪತ್ತು ಕೊಡುವ ದೇವಾ ವೀರಾಂಜನೇಯ ನಾವು ಸದ್ಯ ಪ್ರತಿದಿನ ಬೆಳಿಗ್ಗೆ ಸಾಯಂಕಾಲ ಪೂಜಾ ಪುನಸ್ಕಾರ ನಡೆದುಕೊಂಡು ಬರುತ್ತಿದ್ದೇವೆ ವಾರಕ್ಕೂಮೆ ಸಾವಿರಕ್ಕೂ ಹೆಚ್ಚು ಜನರಿಗೆ ಅನ್ನದಾಸೋಹ ನಡೆಯುತ್ತಿದೆ. ದೇವಸ್ಥಾನ ಅಭಿವೃದ್ಧಿಗೆ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ ಸಾರ್ವಜನಿಕರು, ವಿವಿಧ ಕಂಪನಿ ಮಾಲೀಕರು ಆರ್ ಎಂ ಸಿ ಅಂಗಡಿ ಮಾಲೀಕರು ಹೀಗೆ ಪ್ರತಿಯೋಬ್ಬರು ದೇವಸ್ಥಾನಕ್ಕೆ ಸಹಾಯ ಸಹಕಾರ ನೀಡಬೇಕೆಂದು ಮನವಿ ಮಾಡಿ ಕೊಂಡು ಅಧ್ಯಕ್ಷ ಸೆಲ್ವರಾಜ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ರಾಜ್ಯಾಧ್ಯಕ್ಷ ವಿ ಆನಂದ್ ಮತ್ತು ಪ್ರಧಾನ ಅರ್ಚಕರಾದ ಶ್ರೀ ಚಂದ್ರಶೇಖರ್ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಹಿರಿಯ ಮುಖಂಡ ಮುನಿರಾಜು,ಲೋಕೇಶ್,ಚೌಧರಿ, ಶ್ರೀಕಾಂತ್ ಸೇರಿದಂತೆ ಮುಂತಾದವರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್




