
ಕಿತ್ತೂರು: ಮೊನ್ನೆ ತಾನೇ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಮಲಪ್ರಭಾ ನದಿ ದಂಡೆಯ ವೀರಾಪುರ ಗ್ರಾಮದಲ್ಲಿ ಯೂರಿಯಾ ಗೊಬ್ಬರದ ಕೊರತೆಯಿಂದ ರೈತರಿಗೆ ತೊಂದರೆ ಯಾಗುತ್ತಿದೆ ಎಂಬ ವರದಿಯನ್ನು ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಸಮಗ್ರವಾಗಿ ವರದಿ ತಯಾರಿಸಿ ಬೆಳಗಾವಿ ಜಿಲ್ಲೆಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕ Hd ಕೋಳೆಕರವರ ಗಮನಕ್ಕೆ ತೆಗೆದುಕೊಂಡು ಬಂದಿದ್ದರು. ಇದಕ್ಕೆ ಕೂಡಲೇ ಸ್ಪಂದಿಸಿದ ಜಂಟಿ ನಿರ್ದೇಶಕರು ವೀರಾಪುರ ಗ್ರಾಮದ ರೈತರ ಅನುಕೂಲಕ್ಕಾಗಿ ಇಂದು 15 ಟನ್ ಯೂರಿಯಾ ಗೊಬ್ಬರವನ್ನು ಟ್ರಕ್ ಮೂಲಕ ಕಳಿಸಿಕೊಟ್ಟಿದ್ದಾರೆ.

ಇನ್ನೂ ಈ ಬಗ್ಗೆ ಕಿತ್ತೂರು ಕೃಷಿ ಅಧಿಕಾರಿಗಳು ಇದಕ್ಕೆ ಸಂತೋಷಗೊಂಡ ರೈತರು ಪೂಜೆ ಸಲ್ಲಿಸುವ ಮೂಲಕ ಸ್ವಾಗತ ಮಾಡಿದರು. ನಂತರ ಕೃಷಿ ಅಧಿಕಾರಿಗಳು ಆದ ಸೋಮಯ್ಯ ನಿಂಬಲಗುಂದಿ ಮಾತನಾಡಿದರು. ಒಟ್ಟಾರೆ ಸಂತೋಷ ಗೊಂಡ ವೀರಾಪುರ ಗ್ರಾಮದ ರೈತರು ಕೃಷಿ ಅಧಿಕಾರಿಗಳು ಹಾಗೂ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಅವರಿಗೆ ಧನ್ಯವಾದಗಳು.
ವರದಿ: ಬಸವರಾಜು




