
ಬಾಗಲಕೋಟ: ಜಿಲ್ಲೆಯ ಜಮಖಂಡಿ ತಾಲೂಕಿನ ಚೌಡಯ್ಯ ನಗರದಲ್ಲಿರುವ ಗಾಣದೇವಿ ದೇವಸ್ಥಾನ ಟ್ರಸ್ಟ್ ಕಮಿಟಿ ಜಮಖಂಡಿ ವತಿಯಿಂದ ಗಾಣದೇವಿ ದೇವಸ್ಥಾನ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಶ್ರಾವಣ ಮಾಸದ 3ನೇ ಶುಕ್ರವಾರ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಮುಂಜಾನೆ ದೇವಿಗೆ ಪಂಚಾಮೃತ ಅಭಿಷೇಕದೊಂದಿಗೆ ದೇವಿಗೆ ಮಹಾ ಮಂಗಳಾರತಿ ಹಾಗೂ ವಿವಿಧ ಪೂಜಾ ನೇರವೇರಿಸಿದ್ದರು.
ನಂತರ ಸಾವಿರಾರು ಭಕ್ತರೊಂದಿಗೆ ವಿವಿಧ ವಾದ್ಯ ಮೇಳದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಕುಂಭಮೇಳದೊಂದಿಗೆದೇವಿಯ ಭಾವಚಿತ್ರ ಮೆರವಣಿಗೆ ಅತಿ ಅದ್ಧೂರಿಯಾಗಿ ನೇರವೆರಿತು.
ಬಂದಂತಾ ಭಕ್ತಾದಿಗಳಿಗೆ ಮಹಾಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತು. ಈ ಕಾರ್ಯಕ್ರಮ ದೇವಸ್ಥಾನದಲ್ಲಿ ಜಾತ್ರಾ ಕಮಿಟಿಯ ಅಧ್ಯಕ್ಷರು ಸರ್ವಸದಸ್ಯರು ಹಾಗೂ ಹಲವಾರು ಬಕ್ತಾದಿಗಳು ಬಾಗಿಯಾಗಿದ್ದರು.
ವರದಿ: ಬಂದೇನವಾಜ ನದಾಫ




