Ad imageAd image

ಬೆಳಗಾವಿ ಭಾರಿ ಮಳೆ : ಯಲ್ಲಮ್ಮವಾಡಿ ಯಲ್ಲಮ್ಮ ದೇವಿಗೆ ಜಲ ದಿಗ್ಬಂಧನ

Bharath Vaibhav
ಬೆಳಗಾವಿ ಭಾರಿ ಮಳೆ : ಯಲ್ಲಮ್ಮವಾಡಿ ಯಲ್ಲಮ್ಮ ದೇವಿಗೆ ಜಲ ದಿಗ್ಬಂಧನ
WhatsApp Group Join Now
Telegram Group Join Now

ಬೆಳಗಾವಿ : ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಮಳೆ ಸುರಿಯುತ್ತಿದ್ದು, ತಡರಾತ್ರಿ ಮಳೆಗೆ ಯಲ್ಲಮ್ಮವಾಡಿ ಕೆರೆ ತುಂಬಿ ಸುಕ್ಷೇತ್ರ ಯಲ್ಲಮ್ಮವಾಡಿ ಯಲ್ಲಮ್ಮ ದೇವಿ ಮೂಲ ವಿಗ್ರಹ ಅರ್ಧದಷ್ಟು ಮುಳುಗಡೆಯಾಗಿ ದೇವಸ್ಥಾನ ಜಲ ದಿಗ್ಬಂಧನಗೊಂಡಿದೆ.

ಮಹಾರಾಷ್ಟ್ರ ಮತ್ತು ಕರ್ನಾಟಕ ಉಭಯ ರಾಜ್ಯಗಳ ಈ ದೇವಾಲಯಕ್ಕೆ ಭಕ್ತರ ಆಗಮನ ಅಧಿಕ ಇರುವುದರಿಂದ, ಅದರಲ್ಲೂ ಶ್ರಾವಣ ಮಾಸ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸಿದ್ದಾರೆ.ಜಲಾವ್ರತ ಹಿನ್ನೆಲೆ ದೂರದಿಂದಲೇ ದೇವಿಯ ದರ್ಶನವನ್ನು ಪಡೆದುಕೊಳ್ಳುತ್ತಿದ್ದಾರೆ.

ಇದೀಗ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯಲ್ಲಮ್ಮವಾಡಿ ಸುಕ್ಷೇತ್ರ ಯಲ್ಲಮ್ಮದೇವಿ ಮೂಲ ವಿಗ್ರಹ ಅರ್ಧದಷ್ಟು ಮುಳುಗಡೆಯಾಗಿದೆ.

ಹಳ್ಳದ ಪಕ್ಕದಲ್ಲಿ ದೇವಸ್ಥಾನ ಇರುವುದರಿಂದ ಅಪಾಯ ಮಟ್ಟದಲ್ಲಿ ನೀರು ಹರಿಯುತ್ತಿದೆ. ಪರಿಣಾಮ ದೇವಸ್ಥಾನ ನೀರಿನಿಂದ ಸುತ್ತುವರೆದಿದೆ. ದೂರದಿಂದಲೇ ಭಕ್ತರು ದೇವಿಯ ದರ್ಶನ ಪಡೆಯುತ್ತಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!