ಸೇಡಂ: ಪಟ್ಟಣದ ಪ್ರವಾಸ ಮಂದಿರದಲ್ಲಿ ಹಮ್ಮಿಕೊಂಡಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಘಟಕ ವತಿಯಿಂದ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾಧ್ಯಕ್ಷರು ಮಲ್ಲನಗೌಡ ಪಾಟೀಲ್, ರಾಜ್ಯ ಮಹಿಳಾ ಸಂಚಾಲಕರು ದೇವಕಿ, ಜಿಲ್ಲೆ ಮಹಿಳಾ ಸಂಚಾಲಕರು ಶ್ರೀದೇವಿ, ತಾಲೂಕ ಅಧ್ಯಕ್ಷರಾದ ಅನಿಲ್ ಪೋಟೆಳಿ, ತಾಲೂಕು ಉಪಾಧ್ಯಕ್ಷರಾದ ಇಮ್ರಾನ್ ಶೇಕ್ ಇವರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ತಾಲೂಕ ಕಾರ್ಯಾಧ್ಯಕ್ಷರಾಗಿ ಸಾಬಪ್ಪ ಅಬ್ಬಗಲ್, ತಾಲೂಕ ಕಾರ್ಯದರ್ಶಿಯಾಗಿ ನರಸಪ್ಪ ಕಿಷ್ಟಪುರ್, ತಾಲೂಕು ಪ್ರಧಾನ ಕಾರ್ಯದರ್ಶಿ ಮಹೇಂದ್ರ ರೆಡ್ಡಿ, ತಾಲೂಕ ಸಂಘಟನಾ ಕಾರ್ಯದರ್ಶಿ ಅಶೋಕ್ ಬೂದುರ್, ತಾಲೂಕ ಖಜಾಂಚಿ ಮಹಿಪಾಲ್ ದೊಡ್ಮನಿ, ತಾಲೂಕು ಮಹಿಳಾ ಘಟಕ ಅಧ್ಯಕ್ಷ ಅನಿತಾ, ಮುಧೋಳ ಹೋಬಳಿ ಅಧ್ಯಕ್ಷರಾದ ಭೀಮ ಶಂಕರ್, ಹೋಬಳಿ ಉಪಾಧ್ಯಕ್ಷರಾದ ಕಾಶಪ್ಪ ಮೆದಕ್, ಶೀಲಾರಕೊಟ್ ಗ್ರಾಮ ಘಟಕ ಅದ್ಯಕ್ಷರಾಗಿ ನವೀನ್, ಕಿಷ್ಟಪೂರ್ ಗ್ರಾಮ ಘಟಕ ಅದ್ಯಕ್ಷರಾಗಿ ಮಧು, ಸೇರಿದಂತೆ ಇನ್ನಿತರರು ರೈತರು ಮುಖಂಡರು ಭಾಗಿಯಾಗಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




