ಮುಂಬೈ: ನಟ ಹೃತಿಕ್ ರೋಷನ್ , ಜೂನಿಯರ್ ಎನ್ಟಿಆರ್ ಮತ್ತು ಕಿಯಾರಾ ಅಡ್ವಾಣಿ ಅಭಿನಯದ ವಾರ್ 2 ಸಿನಿಮಾ ಮೇಲೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇದೆ. ಆದರೆ ಈ ಸಿನಿಮಾದ ಸೆನ್ಸಾರ್ ಆಗಿದ್ದು, ಕೆಲ ಬದಲಾವಣೆಗಳನ್ನ ಮಾಡುವಂತೆ ಸಿಬಿಎಫ್‌ಸಿ ಹೇಳಿದೆ ಎನ್ನಲಾಗುತ್ತಿದೆ.
ಈ ವಾರ್2 ಸಿನಿಮಾ ಆಗಸ್ಟ್ 14ರಂದು ರಿಲೀಸ್ ಆಗುತ್ತಿದ್ದು, ಅಭಿಮಾನಿಗಳು ಕಿಯಾರಾ ಹಾಗೂ ಹೃತಿಕ್ ಜೋಡಿಯನ್ನ ತೆರೆಯ ಮೇಲೆ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ.

ಇನ್ನು ಬಿಡುಗಡೆಗೂ ಮೊದಲು ಸಿನಿಮಾ ಸೆನ್ಸರ್ ಆಗಿದ್ದು, ಹಲವು ದೃಶ್ಯಗಳಿಗೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಕತ್ತರಿ ಹಾಕಿದೆ ಎನ್ನಲಾಗುತ್ತಿದೆ. ಆಕ್ಷನ್ ಸೀಕ್ವೆನ್ಸ್‌ಗಳಲ್ಲಿ ಯಾವುದೇ ಕಡಿತಗಳನ್ನು ಮಾಡಲು ಆದೇಶ ನೀಡದಿದ್ದರೂ ಸಹ ಕೆಲವು ದೃಶ್ಯಗಳು ಮತ್ತು ಸಂಭಾಷಣೆಗಳನ್ನು ತೆಗೆದುಹಾಕಿ ಅಥವಾ ಬದಲಾವಣೆ ಮಾಡಿ ಎಂದು ಹೇಳಿದೆ.




