ನಿಪ್ಪಾಣಿ :ನಗರದ ಶ್ರೀ ಡಾಕ್ಟರ ಬಾಬಾಸಾಹೇಬ ಅಂಬೇಡ್ಕರ ಭವನದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳ ಹಾಗೂ ನಿವೃತ್ತ ಪೋಲಿಸ್ ಸಿಬ್ಬಂದಿಗಳ ಸಂಘದ ಪದಾಧಿಕಾರಿಗಳ ನೇಮಕ ಮಾಡಲಾಯಿತು.
ಕರ್ನಾಟಕ ರಾಜ್ಯ ನಿವೃತ್ತ ಪೊಲೀಸ್ ಅಧಿಕಾರಿಗಳ ಹಾಗೂ ನಿವೃತ್ತ ಪೋಲಿಸ್ ಸಿಬ್ಬಂದಿಗಳ ಸಂಘ ನಿಪ್ಪಾಣಿ ತಾಲ್ಲೂಕ ಘಟಕದ ಇಂದು ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಿ ಎಲ್ಲರ ಒಪ್ಪಿಗೆ ಮೇರೆಗೆ ಜವಾಬ್ದಾರಿಯನ್ನು ವಹಿಸಿಕೊಂಡರು.
ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷರಾಗಿ ನಿವೃತ್ತ ಪಿಎಸ್ಐ ಡಿ ಬಿ ಕೊತ್ವಾಲ್ ಆಯ್ಕೆ, ಉಪಾದ್ಯಕ್ಷರಾಗಿ ಎ. ಎಮ್. ಮಾನೆ, ಕಾರ್ಯದರ್ಶಿಯಾಗಿ ಎಂ.ಜಿ. ನಿಲಾಕೆ , ಖಜಾಂಜಿಯಾಗಿ ಪ್ರಕಾಶ. ಕೆ. ಗಾವಡೆ ಯವರನ್ನು ಇನ್ನುಳಿದ ಸಂಘದ ಸದಸ್ಯರು ಆಯ್ಕೆಯನ್ನು ಮಾಡಿದರು.
ಆಯ್ಕೆಯಾದ ಪದಾಧಿಕಾರಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು ಹಾಗೂ ಈ ಸಂದರ್ಭದಲ್ಲಿ ನಿವೃತ್ತ ಅಧಿಕಾರಿಗಳು ಹಾಗೂ ಪೋಲಿಸ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ




