Ad imageAd image

ಬೆಳಗಾವಿ ಗ್ರಾಮೀಣ ಪೊಲೀಸ್‌ರಿಂದ ಜೂಜಾಟದ ಮೇಲೆ ದಾಳಿ: 10 ಆರೋಪಿತರ ಬಂಧನ

Bharath Vaibhav
ಬೆಳಗಾವಿ ಗ್ರಾಮೀಣ ಪೊಲೀಸ್‌ರಿಂದ ಜೂಜಾಟದ ಮೇಲೆ ದಾಳಿ: 10 ಆರೋಪಿತರ ಬಂಧನ
WhatsApp Group Join Now
Telegram Group Join Now

ಬೆಳಗಾವಿ: ಮಚ್ಚೆ ಗ್ರಾಮದ ಬಿಸಿಎಂ ಹಾಸ್ಟೇಲ್ ಹಿಂದಿನ ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿದ ಆರೋಪದ ಮೇಲೆ ಬೆಳಗಾವಿ ಗ್ರಾಮೀಣ ಪೊಲೀಸರು 10 ಜನ ಆರೋಪಿತರನ್ನು ಬಂಧಿಸಿದ್ದಾರೆ.

ಮಹಾದೇವ ಬಸವಣ್ಣೆ ಕುಪಣಿ (37) ಸಾ|| ರಂಗದೋಳ್ಳಿ, 2) ಜ್ಯೋತಿಬಾ ಮಾರುತಿ ದರವೇಶಿ (32) ಸಾ|| ಸಂತಿಬಸ್ತವಾಡ 3) ಬಸವರಾಜ ಬಸಪ್ಪ ಗುಂಡ್ಯಾಗೋಳ (27) ಮಾರ್ಖಂಡೆಯ ನಗರ 4) ಶ್ರೀಕಾಂತ ಜೋಮಾ ಸನದಿ(30) ಸಾ|| ದೇವಗಿರಿ 5) ದರ್ಶನಕುಮಾರ ವಿಜಯ ತಳವಾರ ಸಾ॥ ಅರಭಾಂವಿ ಸದ್ಯ ರಂಗದೋಳಿ, 6) ಯಲ್ಲಪ್ಪ ತಿಪ್ಪಣ್ಣ ಪೆಂಡಾರ (36) ಸಾ॥ ಮಾರ್ಖಂಡೆಯ ನಗರ 7) ಸಿದ್ರಾಯಿ ಯಲ್ಲಪ್ಪ ಹೊನ್ನುಂಗಿ (35) ಸಾ॥ ಸಂತಿ ಬಸ್ತವಾಡ 8) ಪರುಶರಾಮ ಲಕ್ಷ್ಮಣ ದರವೇಶಿ (32) ಸಾ|| ಸಂತಿಬಸ್ತವಾಡ, 9) ಸತ್ಯಪ್ಪ ದುರ್ಗಪ್ಪ ಹುಂಚ್ಯಾನಟ್ಟಿ (23) ಸಾ|| ಸೋಮನಟ್ಟಿ ತಾ|| ಗೋಕಾಕ. ಸದ್ಯ ಭವಾನಿ ನಗರ. 10) ಮಂಜುನಾಥ ರಮೇಶ ನಾಯ್ಕರ (2) ಸಾ|| ಯರಗಟ್ಟಿ ಸದ್ಯ ಭವಾನಿ ನಗರ, ಬೆಳಗಾವಿ ಇವರೆಲ್ಲ ತಮ್ಮ ಲಾಭಕ್ಕಾಗಿ ಇಸ್ಪೀಟ ಎಲೆಗಳ ಮೇಲೆ ಹಣ ಹಚ್ಚಿ ಅಂದರ ಬಾಹರ್ ಎಂಬ ಜೂಜಾಟ ಆಡುತ್ತಿದ್ದಾಗ, ಶ್ರೀ. ಸಂತೋಷ ದಳವಾಯಿ ಪಿಎಸ್‌ಐ ಬೆಳಗಾವಿ ಗ್ರಾಮೀಣ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ ಅವರನ್ನು ವಶಕ್ಕೆ ಪಡೆದುಕೊಂಡು ಅವರಿಂದ ರೂ. 13,000/-ಹಣ, ಸೋಲಾರ ಬ್ಯಾಟರಿ ಒಂದು ಅಕಿ. ರೂ.1200/- ಚಾರ್ಜ ಬಲ್ಲ ಒಂದು ಅಕಿ. 200 ಹೀಗೆ ಒಟ್ಟು 14,400/- ಮೌಲ್ಯದ ವಸ್ತುಗಳನ್ನು ಜಪ್ತಪಡಿಸಿಕೊಂಡು ಆರೋಪಿತರ ವಿರುದ್ಧ ಬೆಳಗಾವಿ ಗ್ರಾಮೀಣ ಠಾಣೆಯ ಪ್ರ ಸಂ.147/2025 ಕಲಂ. 87 ಕೆ. ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಮುಂದುವರೆಸಲಾಗಿದೆ.

ಗಾಂಜಾ ಸೇವಿಸುತ್ತಿದ್ದ ವ್ಯಕ್ತಿಯ ಬಂಧನ: 2)  ದಿನಾಂಕ: 10/08/2025 ರಂದು ಆರೋಪಿತನಾದ 1) ಹುಸೇನ ರಾಜೇಸಾವ ಶೇಖ (26) ಸಾ॥ ಪೀರನವಾಡಿ, ಬೆಳಗಾವಿ ಇವನು ನಗರದ ರೇಲ್ವೆ ಸ್ಟೇಶನ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಸಹಜವಾಗಿ ವರ್ತಿಸುತ್ತಿದ್ದ ಬಗ್ಗೆ ಕಂಡು ಬಂದಾಗ ಸದರಿ ವ್ಯಕ್ತಿಯನ್ನು ಹಿಡಿದುಕೊಂಡು ವಿಚಾರಣೆ ಮಾಡಲಾಗಿ ಯಾವುದೋ ಮಾದಕ ಪದಾರ್ಥ ಸೇವನೆ ಮಾಡಿ ವರ್ತಿಸುತ್ತಿರುವಂತೆ ಕಂಡು ಬಂದಿದ್ದರಿಂದ  ರುಕ್ಕಿಣಿ. ಎ. ಪಿಎಸ್‌ಐ ಕ್ಯಾಂಪ್ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯವರು ಆರೋಪಿತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಅವನ ವಿರುದ್ಧ ಕ್ಯಾಂಪ್ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ.57/2025 ಕಲಂ.27(b) ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಲಾಗಿದೆ.

 ವರದಿ: ಮಹಾಂತೇಶ್ ಹುಲಿಕಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!