ಭಾಲ್ಕಿ: ಭಾರತೀಯ ಜನತಾ ಪಕ್ಷದಿಂದ ಉಚ್ಛಾಟಿತ ಡಿ.ಕೆ.ಸಿದ್ರಾಮ ರವರ ಜೊತೆಯಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳಲ್ಲಿ ಬಿ.ಜೆ.ಪಿ ಕಾರ್ಯಕರ್ತರು ಭಾಗವಸಿಬಾರದು ಎಂದು ಬಿಜೆಪಿ ಭಾಲ್ಕಿ ಮಂಡಲ ಅಧ್ಯಕ್ಷ ವೀರಣ್ಣಾ ಕಾರಬಾರಿ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಡಿ.ಕೆ.ಸಿದ್ರಾಮ ರವರು 2023 ರ ಚುನಾವಣೆಯಲ್ಲಿ ಭಾಲ್ಕಿಯಲ್ಲೊಂದು ಪಕ್ಷ, ಬೀದರನಲ್ಲೊಂದು ಪಕ್ಷಕ್ಕಾಗಿ ದುಡಿದ ಕಾರಣ ಅವರಿಗೆ ಪಕ್ಷದಿಂದಲೇ ಉಚ್ಛಾಟಿಸಲಾಗಿದೆ. ಆದರೆ ಅವರು ಬಿಜೆಪಿ ಕಾರ್ಯಕರ್ತರನ್ನು ತೆಗೆದುಕೊಂಡು ಕಾರ್ಯಕ್ರಮ ಮಾಡುತ್ತಿರುವುದು ನೋಡಿದರೆ, ಕಾಂಗ್ರೆಸ್ ಬಿ ಟೀಮ್ ನಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಭಾರತೀಯ ಜನತಾ ಪಕ್ಷದ ಯಾವುದೇ ಸದಸ್ಯರು ಅವರ ಜೊತೆಗೆ ಕಾಣಿಸಿಕೊಳ್ಳಬಾರದು. ಒಂದು ವೇಳೆ ಅವರ ಜೊತೆಯಲ್ಲಿ ಕಾಣಿಸಿಕೊಂಡರೆ ಪಕ್ಷ ಕೈಗೊಳ್ಳುವ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಎಚ್ಚರಿಸಿದರು.
ಸುದ್ದಿ ಗೋಷ್ಠಿಯಲ್ಲಿ ಬಿಜೆಪಿಯ ಪ್ರಮುಖರಾದ ಸಂಗಮೇಶ ಕಾರಾಮುಂಗೆ, ಉತ್ತಮ ಪುರಿ, ಶಾವುರಾಜ ಪವಾರ, ಪಂಢರಿ
ಮೇತ್ರೆ ಇದ್ದರು.
ವರದಿ:ಸಂತೋಷ ಬಿಜಿ ಪಾಟೀಲ




