Ad imageAd image

ಇಂದಿರಾ ನಗರದಲ್ಲಿ ಅದ್ದೂರಿಯಾಗಿ ಕುಡಿಯುವ ನೀರಿನ ಘಟಕಗಳ ಉದ್ಘಾಟನೆ ನಡೆಯಿತು.

Bharath Vaibhav
ಇಂದಿರಾ ನಗರದಲ್ಲಿ ಅದ್ದೂರಿಯಾಗಿ ಕುಡಿಯುವ ನೀರಿನ ಘಟಕಗಳ ಉದ್ಘಾಟನೆ ನಡೆಯಿತು.
WhatsApp Group Join Now
Telegram Group Join Now

ಚಿಕ್ಕೋಡಿ : ಶಾಸಕ ಗಣೇಶ್ ಹುಕ್ಕೇರಿ ಅವರು ಕುಡಿಯುವ ನೀರಿನ ಘಟಕಗಳ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಅವರ ವಿಶೇಷ ಅನುದಾನ 10 ಕೋಟಿ ರೂಪಾಯಿಗಳು ತಂದು ಚಿಕ್ಕೋಡಿ ನಗರದ ಪ್ರತಿಯೊಂದು ವಾರ್ಡನಲ್ಲಿ ಡಾಂಬರೀಕರಣ ಕಾರ್ಯ ಕೈಗೊಳ್ಳಲಾಗುವುದು. ಇಂದಿರಾ ನಗರದಲ್ಲಿ ಮಹಿಳೆಯರಿಗೆ ಅನುಕೂಲವಾಗುವ ದೃಷ್ಟಿಯಿಂದ ಅರ್ ಓ ಪ್ಲಾಂಟ್ ಅಳವಡಿಸಿಲಾಗಿದೆ. ಈ ತರಹ ಪ್ರತಿಯೊಂದು ವಾರ್ಡ್ ನಲ್ಲಿ ಎರಡು ಆರ ಓ ಪ್ಲಾಂಟ್ ಗಳು ಅಳವಡಿಸಲಾಗುವುದು ಎಂದರು.

ಪುರಸಭೆ ಸದಸ್ಯ ಸಾಬಿರ ಜಮಾದಾರ್ ಮಾತನಾಡಿ ಗುಡ್ಡಗಾಢ ಪ್ರದೇಶ ಇರುವುದರಿಂದ ಮಹಿಳೆಯರಿಗೆ ಕೆಳಗಡೆ ಹೋಗಿ ನೀರು ತರುವುದು ಕಷ್ಟವಾಗುತ್ತಿದೆ ಹೀಗಾಗಿ ಅತ್ಯಂತ ಶುದ್ಧ ಕುಡಿಯುವ ನೀರಿನ ಘಟಕ ಅವಶ್ಯಕತೆ ಇರುವುದರಿಂದ, ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲಾಗಿದೆ ಎಂದರು ಹಾಗೂ ಎಂಎಲ್ಸಿ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ್ ಹುಕ್ಕೇರಿ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ರಸ್ತೆ ಚರಂಡಿ, ವಿದ್ಯುತ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ಅಭಿವೃದ್ಧಿ ಕಾರ್ಯಗಳು ಇಂದಿರಾನಗರದಲ್ಲಿ ಕೆಲಸ ಕಾರ್ಯಗಳನ್ನು ಮಾಡಲಾಗಿದೆ ಎಂದರು.

ಪುರಸಭೆ ಸದಸ್ಯ ರಾಮಾ ಮಾನೆ ಮಾತನಾಡಿ ಪ್ರಕಾಶ್ ಪ್ರಕಾಶ ಹುಕ್ಕೇರಿ, ಶಾಸಕ ಗಣೇಶ್ ಹುಕ್ಕೇರಿ ಹಾಗೂ ಪುರಸಭೆ ಸದಸ್ಯ ಸಾಬೀರ ಜಮಾದಾರ್ ಅವರ ನೇತೃತ್ವದಲ್ಲಿ ಇಂದಿರಾ ನಗರದಲ್ಲಿ ಆರ್ ಓ ಪ್ಲಾಂಟ ಅಳವಡಿಸಿದ್ದು ಒಳ್ಳೆ ಕಾರ್ಯ. ಬಡಜನ ಸೇರಿದಂತೆ ಎಲ್ಲರಿಗೂ ಶುದ್ಧ ಕುಡಿಯುವ ನೀರು ಲಭ್ಯವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಅನಿಲ್ ಮಾನೆ, ಇರ್ಫಾನ್ ಬೇಪಾರಿ, ಗುಲಾಬ್ ಹುಸೇನ್ ಬಾಗವಾನ, ಚಂದ್ರಕಾಂತ್ ಕಾಮಕರ, ಮಂಜೂರು ಜಮಾದಾರ, ಸುದೀರ್ ಮಾಯಪ್ಪಗೋಳ, ಹನುಮಂತ ಗಾಡೀವಡ್ಡರ, ರವಿ ದರ್ಜಿ, ಅಮಿತ್ ಮಾಳಿಗೆ, ವಸಂತ ಟೈಗಲೆ, ಆರಿಫ್ ನಾಯಿಕವಾಡಿ ಅಮಿತ ಕಾಮಕರ, ಗಜಾನನ ಪೋತದಾರ, ಸಮಸ್ತ ಇಂದಿರಾ ನಗರ ಜನರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ : ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!