ಮೊಳಕಾಲ್ಮೂರು : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶವಗಳ ಬುರುಡೆ ಪತ್ತೆ ಹಚ್ಚಲು ಹಗೆಯುವುದು ಅನಾಮಿಕನೊಬ್ಬ ದಿನಕ್ಕೊಂದು ಸ್ಥಳ ತೋರಿಸುತ್ತಿರುವುದು, ಆ ಸ್ಥಳಗಳಲ್ಲಿ ಶವಗಳನ್ನು ಹುಡುಕಲು ಬೇಕಾಬಿಟ್ಟಿಯಾಗಿ ಜನರ ದಿಕ್ಕು ತಪ್ಪಿಸುತ್ತಿರುವುದನ್ನು ನೋಡಿದರೆ ಇದರಲ್ಲಿ ರಾಜ್ಯ ಸರ್ಕಾರದ ಕೈವಾಡ ಇರುವುದು ಎದ್ದು ಕಾಣುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬೇಡರಹಳ್ಳಿ ಬಸವ ರೆಡ್ಡ ಆಕ್ರೋಶ ಹೊರ ಹಾಕಿದರು.

ಪಟ್ಟಣದಲ್ಲಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪ್ರತಿಭಟನೆ ಮಾಡಿ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ ಅವರು ಮಾತನಾಡಿದರು.

ಈ ಪ್ರಕರಣದಲ್ಲಿ ರಾಜ್ಯದ ಜನರಿಗೆ ಸತ್ಯ ತಿಳಿಯುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ ಈ ಪ್ರಕರಣವನ್ನು ರಾಷ್ಟ್ರೀಯ ತನಿಕಾ ಸಂಸ್ಥೆ ಏನ್ ಐಏ ಗೆ ವೈಸುವ ಮೂಲಕ ಪ್ರಕರಣ ತನಿಖೆ ಮಾಡಬೇಕೆಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಮಲ್ಲಳ್ಳಿ ರವಿಕುಮಾರ್ ಮಾತನಾಡಿ ಧರ್ಮಸ್ಥಳದ ಮಂಜುನಾಥ ಸ್ವಾಮಿ ಸನ್ನಿಧನಾ ಪವಿತ್ರ ಧಾರ್ಮಿಕ ಕ್ಷೇತ್ರವಾಗಿದ್ದು ದೇಶ ವಿದೇಶ ಗಮನಸೆಳೆಯುವ ಈ ಪ್ರಕರಣವನ್ನು ಇಲ್ಲಿಗೆ ನಿಲ್ಲಿಸಬೇಕು ಈ ಪ್ರಕರಣದಲ್ಲಿ ಯಾವುದೇ ರೀತಿಯ ಸಾಕ್ಷಾಧಾರಗಳು ಇಲ್ಲದೆ ಅನಾಮಿಕನ ಮಾತನ್ನು ಕೇಳಿ ಯಾವುದೇ ಸಾಕ್ಷಾಧಾರಗಳಿಲ್ಲದೆ ದುಂದು ವೆಚ್ಚಕ್ಕೆ ಮುಂದಾಗಿದ್ದಾರೆ.
ಸರ್ಕಾರ ಇದನ್ನು ಗಮನಿಸಿ ಉತ್ತಮ ತನಿಖೆಗೆ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ವೆಂಕಟೇಶ್ ರಮೇಶ್ ತಿಪ್ಪೇಶಿ ಮಂಜುನಾಥ್ ಬಸವರಾಜ್ ಮರಿಲಿಂಗಪ್ಪ ಪಾಪಯ್ಯ ಬೋರಯ್ಯ ಮಂಜುನಾಥ ಸೂರಮ್ನಳ್ಳಿ ರಾಜಣ್ಣ ಪಿಟಿಹಟ್ಟಿ ಈರಣ್ಣ ಗುಂಡ್ಲೂರು ತಿಮ್ಮಣ್ಣ ಇನ್ನು ಹಲವರು ಉಪಸ್ಥಿತರಿದ್ದರು.
ವರದಿ : ಪಿಎಂ ಗಂಗಾಧರ




