ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರ ಜಾಮೀನು ರದ್ದಾಗಿರುವುದರ ಬಗ್ಗೆ ಹಿರಿಯ ನಟಿ ಉಮಾಶ್ರೀ ಪ್ರತಿಕ್ರಿಯೆ ನೀಡಿದ್ದು, ದರ್ಶನ್ ಅನೇಕ ಕೊಡುಗೆಗಳನ್ನ ಕೊಟ್ಟಿದ್ದಾರೆ.ಅವರನ್ನ ಬಂಧಿಸಿರುವುದು ಸಿನಿಮಾ ರಂಗಕ್ಕೆ ದೊಡ್ಡ ನಷ್ಡ ಎಂದು ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಈ ವಿಚಾರವಾಗಿ ಮಾತನಾಡಿದ ಅವರು, ಸುಪ್ರೀಕೋರ್ಟ್ ನಿರ್ಧಾರವನ್ನ ನಾವು ಗೌರವಿಸಬೇಕು. ಪ್ರತಿಯೊಬ್ಬ ನಾಗರೀಕರು ಒಪ್ಪಿಕೊಳ್ಳಬೇಕು.
ನಮಗೂ ಈ ವಿಚಾರದಲ್ಲಿ ಬಹಳ ಅನಿವಾರ್ಯ. ನಾನು ಕೆಲ ಸಮಯದ ಹಿಂದೆ ಸಹ ಹೇಳಿದ್ದೆ, ಈಗಲೂ ಹೇಳುತ್ತೇನೆ. ನಾವು ಕಲಾವಿದರೂ ಎಂದಿಗೂ ಸಮಾಜದ ಸ್ವತ್ತು. ಜನ ನಮ್ಮನ್ನ ಬಹಳ ಗಮನಿಸುತ್ತಾರೆ.
ಹಾಗಾಗಿ ನಾವು ಎಚ್ಚರಿಕೆಯಿಂದ ಇರಬೇಕು. ನಮ್ಮ ಮಾತು-ಕೆಲಸದಲ್ಲಿ ಮಿತಿ ಇರಬೇಕು ಎಂದು ಜನ ನಿರೀಕ್ಷೆ ಮಾಡುತ್ತಾರೆ ಎಂದು ಹೇಳಿದ್ದಾರೆ.




