ಬೆಳಗಾವಿ: 30ಕ್ಕೂ ಹೆಚ್ಚು ಬ್ಯೂಟಿ ಪಾರ್ಲರ್ ಗಳ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ ಘಟನೆ ನಗರದ ವಿವಿಧೆಡೆ ನಡೆದಿದೆ.
ನಗರದ ವಿವಿಧ ಬ್ಯೂಟಿ ಪಾರ್ಲರ್ ಗಳಲ್ಲಿ ಕೂದಲಿನ ಕಸಿ, ಕೆಮಿಕಲ್ ಮಿಶ್ರಿತ ವಸ್ತುಗಳ ಬಳಕೆ, ಸ್ಟಿರೈಡ್ ಸೇರಿದಂತೆ ಚರ್ಮದ ಮೇಲೆ ದುಷ್ಪರಿಣಾಮ ಬೀರುವ ವಸ್ತುಗಳನ್ನು ಬಳಸಲಾಗುತ್ತಿದೆ ಎಂದು ಸಾರ್ವಜನಿಕರು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ದೂರು ನೀಡಿದ್ದರು.
ಈ ಹಿನ್ನೆಲೆಯ ಇಂದು ಆರೋಗ್ಯ ಇಲಾಖೆ ಅಧಿಕಾರಿಗಳು ಏಕಕಾಲದಲ್ಲಿ 30ಕ್ಕೂ ಹೆಚ್ಚು ಪಾರ್ಲರ್ ಗಳ ಮೇಲೆ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಹಲವು ಕೆಮಿಕಲ್ ವಸ್ತುಗಳು, ಸ್ಟಿರೈಡ್ ಔಷಧಿಗಳು ಪತ್ತೆಯಾಗಿವೆ. 10 ಪಾರ್ಲರ್ ಗಳಿಗೆ ಬೀಗ ಹಾಕಿಸಿರುವ ಅಧಿಕಾರಿಗಳು 20 ಪಾರ್ಲರ್ ಗಳಿಗೆ ನೋಟಿಸ್ ನೀಡಿದ್ದಾರೆ.




