ಬಳ್ಳಾರಿ : ಮಕ್ಕಳು, ಪತಿಯನ್ನು ಧ್ವಜಾರೋಹಣಕ್ಕೆ ಕಳುಹಿಸಿ ಪಿಎಸ್‌ಐ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳ್ಳಾರಿ ಜಿಲ್ಲೆಯ ಮೋಕಾದಲ್ಲಿ ನಡೆದಿದೆ. ಮೋಕಾ ಪಿಎಸ್‌ಐ ಕೆ. ಕಾಳಿಂಗ ಪತ್ನಿ ಚೈತ್ರ ಎನ್ನುವವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಆಗಸ್ಟ್ 15 ಹಿನ್ನೆಲೆ ಮಕ್ಕಳು ಪತಿಯನ್ನು ಧ್ವಜಾರೋಹಣಕ್ಕೆ ಕಳುಹಿಸಿದ್ದಾರೆ. ಬಳಿಕ ಚೈತ್ರ ನೇಣು ಬಗೆದುಕೊಂಡು ಆತ್ಮಹತ್ಯೆ ಶರಣಾಗಿದ್ದಾರೆ.
ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.




