Ad imageAd image

ಶರಣಬಸವೇಶ್ವರ ಮಠದ 9ನೇ ಪೀಠಾಧಿಪತಿ ಯಾಗಿ ಚಿ. ದೊಡ್ಡಪ್ಪ ಅಧಿಕಾರ ಹಸ್ತಾಂತರ

Bharath Vaibhav
ಶರಣಬಸವೇಶ್ವರ ಮಠದ 9ನೇ ಪೀಠಾಧಿಪತಿ ಯಾಗಿ ಚಿ. ದೊಡ್ಡಪ್ಪ ಅಧಿಕಾರ ಹಸ್ತಾಂತರ
WhatsApp Group Join Now
Telegram Group Join Now

ಕಲಬುರ್ಗಿ : ದಾಸೋಹದ ದಿಗ್ಗಜ, ಲಕ್ಷಾಂತರ ಭಕ್ತರ ಪಾಲಿನ ಆಶ್ರಯಸ್ಥಾನರಾಗಿದ್ದ ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಎಂಟನೇ ಪೀಠಾಧಿಪತಿ ಮಹಾದಾಸೋಹಿ ಪೂಜ್ಯ ಶರಣಬಸಪ್ಪ ಅಪ್ಪಾ (90) ಅವರು ತೀವ್ರ ಅನಾರೋಗ್ಯದಿಂದ ನಿನ್ನೆ ಲಿಂಗೈಕ್ಯರಾದರು.ಅಪ್ಪಾಜಿಯವರು ಕಳೆದ 15 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಶರಣಬಸವೇಶ್ವರ ಸಂಸ್ಥಾನದ ಡಾ.ರಣಬಸವ ಲಿಂಗೈಕ್ಯರಾಗಿರುವ ಹಿನ್ನೆಲೆಯಲ್ಲಿ ವಿವಿಧ ಮಠಾಧೀಶರ ಸಮೂಹದಲ್ಲಿ ಅಂತ್ಯಕ್ರಿಯೆ ವಿಧಿ ವಿಧಾನ ಆರಂಭವಾಗಿದ್ದು, ಪಂಚಾಚಾರ್ಯರ ಕಳಸ ಸ್ಥಾಪಿಸಿ ಸ್ವಸ್ತಿ ಪುಣ್ಯ ಪುರೋಹಿತರು ವಾಚಿಸಲಿದ್ದಾರೆ.

ಸುಮಾರು ಒಂದು ಗಂಟೆಗಳ ಕಾಲ ಅಂತಿಮ ವಿಧಿ ವಿಧಾನ ನಡೆಯಲಿದೆ. ಈ ಒಂದು ಅಂತ್ಯಕ್ರಿಯೆಯಲ್ಲಿ ಡಾ. ಪ್ರಕಾಶ್ ಪಾಟೀಲ್, ಈಶ್ವರ್ ಖಂಡ್ರೆ, ಬಿವೈ ವಿಜಯೇಂದ್ರ ಶಾಸಕರು, ಪತ್ನಿ ದಾಕ್ಷಾಯಿಣಿ, ಪುತ್ರ ದೊಡ್ಡಪ್ಪ ಅಪ್ಪ, ಕುಟುಂಬದ ಸದಸ್ಯರು ಭಾಗಿಯಾಗಿದ್ದಾರೆ.

ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ. ಶರಣಬಸವಪ್ಪ ಅವರು ಧರಿಸಿದ್ದ ಪೇಟ, ಬಳಸುತ್ತಿದ್ದ ಖಡ್ಗ, ಪೇಟ ಶರಣಬಸವಪ್ಪ ಅವರು ಧರಿಸುತ್ತಿದ್ದ ಲಿಂಗ, ಪರುಷ ಬಟ್ಟಲು ನೀಡಿ ಸೋಮನಾಥ ಶಾಸ್ತ್ರಿಗಳು ಇದೇ ವೇಳೆ ಅಧಿಕಾರ ಹಸ್ತಾಂತರಿಸಿದರು. ಶರಣಬಸಪ್ಪ ಅಪ್ಪಾ ಪುತ್ರ 9ನೇ ಪೀಠಾಧಿಪತಿ ಚಿ,ದೊಡ್ಡಪ್ಪಗೆ ಅಧಿಕಾರ ಹಸ್ತಾಂತರಿಸಲಾಯಿತು.

ಚಿರಂಜೀವಿ ದೊಡ್ಡಪ್ಪ ಅಪ್ಪಗೆ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿತು. ಶರಣಬಸವೇಶ್ವರ ಸಂಸ್ಥಾನದ ಜವಾಬ್ದಾರಿಯನ್ನು ದೊಡ್ಡಪ್ಪ ಇನ್ನು ಮುಂದೆ ಹೊರಲಿದ್ದಾರೆ. ಪಲ್ಲಕ್ಕಿಯಲ್ಲಿ ಅಂತಿಮ ಯಾತ್ರೆ ಬಳಿಕ ಶರಣಬಸವಪ್ಪ ಅಂತ್ಯಕ್ರಿಯೆ ನೆರವೇರಲಿದೆ.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!