ಚನ್ನಮ್ಮನ ಕಿತ್ತೂರು: ಕಿತ್ತೂರ ತಾಲೂಕಿನ ಬಸಾಪುರ ಶಿಗೇಹಳ್ಳಿ ಕೆಎ ಗ್ರಾಮದ ಕೆಎಂಎಫ್ ಹಾಲಿನ ಡೈರಿಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ನೆರವೇರಿಸಲಾಯಿತು.
ಕಾರ್ಯದರ್ಶಿ ಬಸವರಾಜ ಭೀಮರಾಣಿ ಅವರು ಕಾರ್ಯಕ್ರಮ ನಿರೂಪಿಸಿದರು. ನಂತರ ಅಧ್ಯಕ್ಷರಾದ ರವಿ ಭೀಮರಾಣಿ ಅವರು ಧ್ವಜಾರೋಹಣ ನೆರವೇರಿಸಿದರು. ಶಾಲಾ ವಿದ್ಯಾರ್ಥಿಗಳ ವಿದ್ಯಾರ್ಥಿನಿಯರು ರಾಷ್ಟ್ರ ಗೀತೆಯನ್ನು ಹಾಡುವ ಮೂಲಕ ದೇಶಪ್ರೇಮ ಮೆರೆದರು ನಂತರ ಶಾಲಾ ವಿದ್ಯಾರ್ಥಿಗಳಿಗೆ ಸಹಿ ಹಂಚಲಾಯಿತು.
ಈ ಸಂದರ್ಭದಲ್ಲಿ ಕೆಎಂಎಫ್ ಹಾಲಿನ ಡೈರಿಯ ಅಧ್ಯಕ್ಷರಾದ ರವಿ ಭೀಮರಾಣಿ, ಉಪಾಧ್ಯಕ್ಷರಾದ ಕಲ್ಲಪ್ಪ ಬಬಲಿ, ಸದ್ಯಸರಾದ ಉಳವಪ್ಪ ಬಬಲಿ, ಫಕೀರಪ್ಪ ನಾಡಗೌಡರ, ಮಡಿವಾಳಪ್ಪ ಭೀಮರಾಣಿ, ವಿನಯಕುಮಾರ ಬಬ್ಲಿ, ಸಂಜೀವಕುಮಾರ ಬಬಲಿ, ಫಕೀರಪ್ಪ ಗೌಡಪ್ಪ ಪಾಟೀಲ, ಪುಂಡಲೀಕ ಪಾಟೀಲ, ಹವಳ್ಳೇಪ್ಪ ಮಾದರ, ದೇಮವ್ವ ಪಾಟೀಲ, ಸವಿತಾ ಶಿವಪೂಜಿಮಠ, ಶಾಲಾ ಶಿಕ್ಷಕರು ಶಿಕ್ಷಕಿಯರು.
ಹಾಲು ಪರೀಕ್ಷಕರು ಚನ್ನಪ್ಪ ಬಬಲಿ, ಗ್ರಾಮದ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ: ಜಗದೀಶ ಕಡೋಲಿ




