ಹಾರೂಗೇರಿ: ಶ್ರೀ ಎಸ್ ಎಸ್ ಜಂಬಗಿ ಮೆಮೋರಿಯಲ್ ಎಜ್ಯುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್, ಹಾರೂಗೇರಿಯಲ್ಲಿ ಜಂಬಗಿ ಸಮೂಹ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ 79ನೆಯ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಸಮಾರಂಭದ ಘನ ಅಧ್ಯಕ್ಷತೆಯನ್ನು ವಹಿಸಿದ ಟ್ರಸ್ಟ್ ನ ಚೇರಮನ್ನರು ಹಾಗೂ ಖ್ಯಾತ ವೈದ್ಯರಾದ ಡಾ.ಎಲ್.ಎಸ್. ಜಂಬಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಪ್ರಜ್ಞಾವಂತ ಯುವಕರು ಸ್ವದೇಶಿ ವಸ್ತುಗಳನ್ನು ಹೆಚ್ಚು ಬಳಸಿ ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಬೇಕು. ಉನ್ನತ ವಿಚಾರಗಳನ್ನು ಬೆಳೆಸಿಕೊಂಡು ರಾಷ್ಟ್ರವನ್ನು ಧೀಮಂತಗೊಳಿಸಬೇಕು. ಇಂದು ಭಾರತ ವಿಶ್ವಗಿರುವಾಗಿ ಇತರ ದೇಶಗಳಿಗೆ ಮಾದರಿಯಾಗಿದೆ. ಭಾರತದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ ಮಹನೀಯರ ಆದರ್ಶಗಳು ನಮಗೆ ಪ್ರೇರಣೆಯಾಗಬೇಕು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಡಾ.ಎ.ಡಿ.ಟೊನಗೆ, ಡಾ.ಸಂಜೀವ ಪಾಟೀಲ,ಡಾ.ರಾಜಶೇಖರ ಪಾಟೀಲ ಪ್ರಕಾಶ ಬದನಿಕಾಯಿ ಪಾಲಯ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು
ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆಗೈದು ನಿವೃತ್ತಿಗೊಂಡ ಪ್ರಯುಕ್ತ ನಿವೃತ್ತ ಮುಖ್ಯೋಪಾಧ್ಯಾಯರಾದ ಡಿ.ಪಿ.ಕಾಪಸಿ ನಿವೃತ್ತ ಶಿಕ್ಷಕರಾದ ಕೆ.ಎಸ್.ಜಂಬಗಿ ನಿವೃತ್ತ ಪ್ರಾಚಾರ್ಯರಾದ ಜಿ.ಆರ್.ಸುಳ್ಳದ ಗುರುಗಳನ್ನು ಟ್ರಸ್ಟ್ ನ ವತಿಯಿಂದ ಸತ್ಕರಿಸಲಾಯಿತು ಅಂಗ ಸಂಸ್ಥೆಗಳ ಪ್ರಾಚಾರ್ಯರಾದ ಡಾ.ಆರ್.ಎಸ್.ಕಾಗವಾಡೆ,ಡಾ.ಬಸವರಾಜ ಗಂಟಿ,
ಹಜರತಲಿ ಪಾನಾರಿ ಅಬ್ದುಲ್ ಮುಜಾವರ ಉಪಸ್ಥಿತರಿದ್ದರು ಅಂಗ ಸಂಸ್ಥೆಗಳ ಉಪನ್ಯಾಸಕರು ಮತ್ತು ವಿದ್ಯಾರ್ಥಿ ವೃಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಯುರ್ವೇದಿಕ್ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕುಮಾರಿ ಸೌಮ್ಯ ಕೊಟಗಿ ಹರ್ ಘರ್ ತಿರಂಗಾ ಹಿನ್ನಲೆಯಲ್ಲಿ ಪ್ರತಿಜ್ಞೆ ವಿಧಿ ಬೋಧಿಸಿದರು ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿ ಐಶ್ವರ್ಯ ತಳವಾರ ದೇಶಭಕ್ತಿಗೀತೆಯನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮವನ್ನು ಯಲ್ಲವ್ವ ಘಂಟಿ ಪ್ರಾರ್ಥನೆ ಹಾಡಿದರು. ಹಿರಿಯ ಉಪನ್ಯಾಸಕರಾದ ಡಾ.ಡಿ.ಪಿ.ಜೋಷಿ ಸ್ವಾಗತಿಸಿದರು. ಉಪನ್ಯಾಸಕರಾದ ಎಂ.ಟಿ.ಬಿದರಿ ಮಾಲಾರ್ಪಣೆ ನೆರವೇರಿಸಿದರು. ಉಪನ್ಯಾಸಕಿ ಶ್ರೀಮತಿ ಗಂಗಾ ಕೆಸರಗೊಪ್ಪ ವಂದಿಸಿದರು. ಉಪನ್ಯಾಸಕರಾದ ಆರ್.ಸಿ.ಉಳ್ಳಾಗಡ್ಡಿ ನಿರೂಪಿಸಿದರು.
ವರದಿ: ಸುಕುಮಾರ ಮಾದರ




