————————–ಸ್ಪೂರ್ತಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಸ್ಥ ಮುತ್ತಣ್ಣ
ಬಳ್ಳಾರಿ: ಜಿಲ್ಲೆ ಕಂಪ್ಲಿ ಸ್ಪೂರ್ತಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಇಂದು ಶ್ರೀ ಕೃಷ್ಣನು ಎಲ್ಲಾ ಧರ್ಮಕ್ಕೂ ಎಲ್ಲ ವರ್ಗಕ್ಕೂ ಸೇರಿದ ಮಹಾನ್ ಸಂತ ಇಡೀ ಪ್ರಪಂಚಕ್ಕೆ ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಸಾಧನೆ ಮಾಡಿದ ಮಾನವತವಾದಿ ಇಂತಹ ಕುಲದಲ್ಲಿ ಹುಟ್ಟಿರುವುದು ನಮ್ಮ ಪುಣ್ಯ ಎಂದು ಹೇಳಲು ಸಂತೋಷವಾಗುತ್ತದೆ ಎಂದರು.
ಪಟ್ಟಣದ ಸ್ಪೂರ್ತಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಕೃಷ್ಣ ಜಯಂತಿ ಪ್ರಯುಕ್ತ ಶ್ರೀ ಕೃಷ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು , ಶ್ರೀ ಕೃಷ್ಣನ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ನಡೆಸಬೇಕು ಎಂದರು.
ಇದೇ ಸಂದರ್ಭದಲ್ಲಿ ಸ್ಪೂರ್ತಿ ಸಲಿಯ ಮುಖ್ಯಸ್ಥರಾದ ಮುತ್ತಣ್ಣ ಅವರು ಮಾತನಾಡಿ, ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಪ್ರತಿವರ್ಷದಂತೆ ಈ ವರ್ಷವೂ ಸರಳವಾಗಿ ಆಚರಿಸುತ್ತಿದ್ದೇವೆ. ನಾಡಿನಾದ್ಯಂತ ಈ ದಿನ ಕೃಷ್ಣನನ್ನು ಪೂಜಿಸುವ ದಿನವಾಗಿದೆ. ದುಷ್ಟರನ್ನು ಶಿಕ್ಷಿಸಲು ಮತ್ತು ನೀತಿವಂತರನ್ನು ರಕ್ಷಿಸಲು ಭೂಮಿಗೆ ಇಳಿದ ಶ್ರೀ ಕೃಷ್ಣನ ಈ ಹಬ್ಬವನ್ನು ಎಲ್ಲರೂ ಸಂತೋಷ ಸಡಗರದಿಂದ ಆಚರಿಸುತ್ತಿದ್ದಾರೆ. ಪ್ರತಿಯೊಬ್ಬರು ಭಗವಾನ್ ಕೃಷ್ಣನ ಭಗವದ್ಗೀತೆಯನ್ನು ತಮ್ಮ ಮನೆಯಲ್ಲಿ ಇಟ್ಟು ಕೊಳ್ಳಬೇಕು ಅದನ್ನು ಪ್ರತಿಯೊಬ್ಬರೂ ಓದಬೇಕು ಅದರ ಸಾರಾಂಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು ಶ್ರೀ ಕೃಷ್ಣನು ಮಹಾಭಾರತದಲ್ಲಿ ತಮ್ಮ ಲೀಲೆಗಳನ್ನು ತೋರಿಸಿದ್ದಾರೆ ಇವರ ಬಗ್ಗೆ ಹೇಳುವುದಾದರೆ ಇಡೀ ದಿನ ಸಾಕಾಗುವುದಿಲ್ಲ ಎಂದು ತಿಳಿಸಿದರು.



