—–ದಲಿತ ಪರ ಸಂಘಟನೆಗಳು ಹೋರಾಟಗಾರರು ಪಾವಗಡ ಪಟ್ಟಣದಲ್ಲಿ ಅರೆಬೆತ್ತಲೆ ಮೆರವಣಿಗೆ
ತುಮಕೂರು: ಜಿಲ್ಲೆ ಪಾವಗಡ ತಾಲ್ಲೂಕಿನ ಪಟ್ಟಣದಲ್ಲಿ ದಿನಾಂಕ, 15/08/25 ಶುಕ್ರವಾರರಂದು ಡಾ. ಬಿ.ಆರ್ ಅಂಬೇಡ್ಕರ್ ವೃತ್ತದ ಬಳಿ ಮಾದಿಗ ಸಮಾಜದ ಸಂಘಟನೆಗಳ ಒಕ್ಕೂಟದಿಂದ ಸದಾಶಿವ ಆಯೋಗ ವರದಿ ವಿಚಾರದೊಂದಿಗೆ ಒಳಮೀಸಲಾತಿಯನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಆಗ್ರಹಿಸಿ. ಪಾವಗಡದ ಮಾದಿಗ ಮತ್ತು ದಲಿತ ಪರ ಒಕ್ಕೂಟ ಸಂಘಟನೆಗಳ ಸದಸ್ಯರು ಶುಕ್ರವಾರ ದಂದು ಅರೆಬೆತ್ತಲೆ ಮೆರವಣಿಗೆ ಮತ್ತು ಪ್ರತಿಭಟನೆ ನಡೆಸಿದರು.
ಈ ವೇಳೆಯಲ್ಲಿ ಮಾತನಾಡಿದ ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕರು ಸಿ ಕೆ ತಿಪ್ಪೇಸ್ವಾಮಿ
30 ವರ್ಷಗಳ ಹೋರಾಟದ ಫಲವಾಗಿ ಒಳಮೀಸಲಾತಿ ನೀಡಬಹುದೆಂದು ಸುಪ್ರಿಂಕೋರ್ಟ್ ತೀರ್ಪು ನೀಡಿದೆ ತೀರ್ಪು ನೀಡಿ ಅ.1ಕ್ಕೆ ವರ್ಷವಾಗಿದ್ದು ರಾಜ್ಯ ಸರ್ಕಾರ ಜಾರಿಗೊಳಿಸಲು ವಿಳಂಬಮಾಡುತ್ತಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಯಥಾವತ್ ತಕ್ಷಣವೇ ಜಾರಿಗೊಳಿಸಬೇಕು ಎಂದು ತಿಳಿಸಿರುತ್ತಾರೆ.
ವಿವಿಧ ಮಾದಿಗ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಒಳ ಮೀಸಲಾತಿ ಜಾರಿಗೊಳಿಸುವತನಕ ಬ್ಯಾಕ್ಲಾಗ್ ಯಾವುದೇ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಬಾರದು ಇಂದು ಮಾದಿಗ ಜನಾಂಗ ಒಕ್ಕೂಟ ಸಂಘಟನೆಗಳು ಎಚ್ಚರಿಸಿದರು.
ಈ ಪ್ರತಿಭಟನೆಯಲ್ಲಿ ಮಾದಿಗ ಸಮುದಾಯದ ಸಂಘಟನೆಗಳ ಮುಖಂಡರುಗಳಾದ ಕರ್ನಾಟಕ ದಲಿತ ಸಂಘರ್ಷ ಸಮತಿಯ. ಸಂಚಾಲಕರಾದ ಪೆದ್ದಣ್ಣ, ಕರ್ನಾಟಕ ಮಾದಿಗ ದಂಡೋರದ ಜಿಲ್ಲಾ ಉಪಾಧ್ಯಕ್ಷರಾದ ವಳ್ಳೂರು ನಾಗೇಶ್, ತಾಲ್ಲೂಕು ಅಧ್ಯಕ್ಷರಾದ ಕಡಮಲಕುಂಟೆ ಹನುಮಂತರಾಯ, ಎಂ.ಆರ್. ಹೆಚ್. ಎಸ್. ಜಿಲ್ಲಾ ಅಧ್ಯಕ್ಷರಾದ ಕನ್ನಮೇಡಿ ಕೃಷ್ಙಮೂರ್ತಿ,. ಮಲ್ಲಿಕಾರ್ಜುನ, ಬಿ ಹೊಸಹಳ್ಳಿ, ಪ್ರಸಾದ್ ಬಾಬು, ಬಿ.ಎಸ್.ಪಿ ಯ ಟಿ. ಹನುಂತರಾಯ, ಡಿ.ಎಸ್.ಎಸ್ ನ ದೇವಲಕೆರೆ ನರಸಿಂಹಮೂರ್ತಿ , ಜೀವಿಕ ಸಂಘಟನೆಯ ಹನುಮಂತರಾಯ, ನರಸಿಂಹಮೂರ್ತಿ, ಗಂಗಾಧರ, ನಲಿಗಾನಹಳ್ಳಿ ಮಂಜುನಾಥ್ ಮುಂತಾದವರು ಪಾಲ್ಗೊಂಡಿದ್ದರು.
ವರದಿ: ಶಿವಾನಂದ




