Ad imageAd image

ಗ್ರಾಮಕ್ಕೆ ಭೇಟಿ ನೀಡದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು

Bharath Vaibhav
ಗ್ರಾಮಕ್ಕೆ ಭೇಟಿ ನೀಡದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು
WhatsApp Group Join Now
Telegram Group Join Now

———————————————–ನೀರಿನ ಸಮಸ್ಯೆ ಇದೆ ಎಂದು ಗ್ರಾಮಸ್ಥರು ಎಷ್ಟೇ ಕರೆ

ಸೇಡಂ:ತಾಲೂಕಿನ ಮೋತಕಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಶಕಲಾಸಪಲ್ಲಿ ಗ್ರಾಮದಲ್ಲಿ ಸುಮಾರು 2 ವರ್ಷದಿಂದ ಜಲ ಜೀವನ ಯೋಜನೆಯ ಕೆಲಸ ಇಷ್ಟ ಬಂದ ಹಾಗೆ ನಡೆಯುತ್ತದೆ, ನಿಲ್ಲುತ್ತದೆ, ಆದರೆ ಗ್ರಾಮದಲ್ಲಿ ಮನೆಗಳಿಗೆ ಒಂದು ಕೊಡ ನೀರು ನಳಗಳ ಸರಬರಾಜು ಇಲ್ಲದಂತಾಗಿದೆ. ಅದು ಅಲ್ಲದೆ ಜನರಿಗೆ 2 ರೀತಿಯ ನೀರು ಕೊಡುತ್ತಿದ್ದಾರೆ. ಈಶ್ವರ ದೇವಸ್ಥಾನ ಹತ್ತಿರ ಬಾವಿಯಲ್ಲಿ ಬೋರ್ ವೆಲ್ ನೀರು ಬಿಡುತ್ತಾರೆ, ಹಾಗೂ ಬಾವಿಯ ನೀರು ಸೇರಿ ಜನಗಳಿಗೆ ಸಿಗುತ್ತವೆ.

ಇದರಿಂದ ಜನರಿಗೆ ರೋಗಾಣುಗಳು ಉಂಟಾಗುವ ಸಾಧ್ಯತೆಗಳಿವೆ ಇದರ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರಿಗೆ, ಅಧ್ಯಕ್ಷರಿಗೆ, ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ನೀರಿನ ಸಮಸ್ಯೆ ತುಂಬಾ ಇದೆ ಅಂತ ಗ್ರಾಮಸ್ಥರು ಎಷ್ಟೇ ಕರೆ ಮಾಡಿದರು ಗ್ರಾಮಕ್ಕೆ ಭೇಟಿ ನೀಡುತ್ತಿಲ್ಲ. ಅಷ್ಟೇ ಅಲ್ಲದೆ ಇಲ್ಲ ಸಲ್ಲದ ನೆಪ ಹೇಳುತ್ತಿದ್ದಾರೆ, ಜಲ ಜೀವನ ಯೋಜನೆಯ ಕೆಲಸ ಪ್ರಾರಂಭ ಮಾಡಿಸುವೆ ಅಂತಾ ಹೇಳಿಕೆ ನೀಡುತ್ತಾರೆ ಆದರೆ ಇದುವರೆಗೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಕುಡಿಯುವುದಕ್ಕೆ ನೀರು ಇಲ್ಲ ನಮ್ಮ ಗೋಳು ಕೇಳುವವರಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಅಭಿವೃದ್ಧಿಯೇ ನಮ್ಮ ಮಂತ್ರ ಎಂದು ಪ್ರತಿ ಕಾರ್ಯಕ್ರಮಗಳಲ್ಲಿ ಹೇಳಿಕೆ ಕೊಡುತ್ತಿರುವ ಸ್ಥಳೀಯ ಶಾಸಕರು ಹಾಗೂ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್ ಅವರಿಗೆ ಇಂತಹ ಸಮಸ್ಯೆಗಳು ಕಣ್ಣಿಗೆ ಕಾಣುವುದಿಲ್ಲವೇ ಎಂಬುದು ಇಲ್ಲಿನ ಸಾರ್ವಜನಿಕರ ಪ್ರಶ್ನೆಯಾಗಿದೆ.

ಮಳೆಗಾಲದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸರಿ ಇಲ್ಲಾ ಎಂಬುದಾದರೆ ಜನಪ್ರತಿನಿಧಿಗಳು ಇದ್ದು ಸತ್ತಂತೆ ಅಲ್ಲವೇ. ನಿರ್ಲಕ್ಷ್ಯ ಮಾಡುತ್ತಿರುವ ಗ್ರಾಮ ಪಂಚಾಯಿತಿ ಅಧಿಕಾರಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಸರಿಯಾದ ಶಿಕ್ಷೆ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದರು.

ವರದಿ: ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!