ಹಾವೇರಿ: ಶಿಗ್ಗಾOವಿಯ ರಾಜ್ಯ ರೈತ ಸಂಘ ಹಸಿರು ಸೇನೆಯ ಹೋರಾಟದಲ್ಲಿ ಮಾಜಿ ಶಾಸಕ ಅಜ್ಜಂಪೀರ ಖಾದ್ರಿಯವರ ಯಾವುದೇ ಕೈವಾಡವಿಲ್ಲ ಎಂದು ಸ್ಪಷ್ಟನೆ ನೀಡಿದ ರೈತರು ಇದು ಯಾವುದೇ ರಾಜಕೀಯ ಪಕ್ಷದ ಹೋರಾಟವಲ್ಲ ಎಂದು ಹಸಿರು ಸೇನೆಯ ಮುಖ್ಯಸ್ಥರಾದ ದೇವರಾಜ ದೊಡ್ಡಮನಿ ಸ್ಪಷ್ಟನೆ ನೀಡಿದ್ದಾರೆ.
ನಮ್ಮ ಹಸಿರು ಸೇನೆ ರೈತರ ಪರವಾಗಿ ರೈತರ ಸಂಕಷ್ಟವನ್ನು ಸರ್ಕಾರಕ್ಕೆ ಪರಿಚಯಿಸುವ ಹೋರಾಟವಾಗಿರುತ್ತದೆ.
ನಾವು ನಮ್ಮ ಬೇಕುಬೇಡಿಕೆಗಳ ಈಡೇರಿಕೆಗೆ ಹೋರಾಟ ಮಾಡುತ್ತಿದ್ದೇವೆ ಹೊರತು ಯಾರ ಒತ್ತಾಯಕ್ಕೆ ಮಣಿದು ಹೋರಾಟ ನಡೆಸುತ್ತಿಲ್ಲ ಎಂದು ಹಸಿರು ಸೇನೆ ಕಾರ್ಯಕರ್ತರು ಹೇಳಿರುತ್ತಾರೆ.
ಹಾಲಿ ಶಾಸಕರ ಬೆಂಬಲಿಗ ಪಂಚಾಯತ್ ಅಧ್ಯಕ್ಷ ಮಾಡಿರುವ ಆರೋಪದ ವಿರುದ್ದ ಮುಂದಿನ ದಿನಗಳಲ್ಲಿ ಹುಲಗೂರಿನಲ್ಲಿ ರಾಜ್ಯ ರೈತ ಸಂಘದಿಂದ ಬೃಹತ್ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ಕೂಡಾ ನೀಡಿದ್ದಾರೆ.



