———————————–ಸಿಡಿಲು ಬಡಿದು ಯುವತಿ ಸಾವು ಪ್ರಕರಣ
ರಾಯಚೂರು: ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯ ಯರಗೆರೆ ಗ್ರಾಮದ ಮಹಿಳೆ ಭವಾನಿ ಗಂಡ ನಾಗರಾಜ್ ವಯಸ್ಸು 23 ವಯಸ್ಸಿನ ಯುವತಿಯೊಬ್ಬಳು ತನ್ನ ಹತ್ತಿ ಹೊಲಕ್ಕೆ ಕಳೆಯನ್ನು ತೆಗೆಯಲು ಹೋದ ಸಂದರ್ಭದಲ್ಲಿ 3 ಗಂಟೆ 30ನಿಮಿಷಕ್ಕೆ ಮಳೆ ಪ್ರಾರಂಭವಾಗಿದ್ದರಿಂದ ಬೇವಿನ ಗಿಡಕ್ಕೆ ಸೀರಿಯಿಂದ ತೊಟ್ಟಿಲು ಹಾಕಿ ಮಗುವನ್ನು ಮಲಗಿಸಿದ್ದಳು ಮಳೆ ಬರುವ ಸಂದರ್ಭದಲ್ಲಿ ಮಗುವನ್ನು ಗಿಡಕ್ಕೆ ಹಾಕಿದ ತೊಟ್ಟಿಲಿನಿಂದ ಮಗುವನ್ನು ತರಲು ಹೋದ ಸಂದರ್ಭದಲ್ಲಿ ಸಿಡಿಲು ಬಡಿದು ಸಾವನ್ನಪ್ಪಿರುವ ವಿದ್ರಾವಿಕ ಘಟನೆ ಯಾರಗೇರಾ ಗ್ರಾಮದಲ್ಲಿ ನಡೆದಿತ್ತು.
ಶಾಸಕರು ಬೆಂಗಳೂರಿಗೆ ಅಧಿವೇಶನ ಹೋದ ಸಂದರ್ಭದಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಈ ಘಟನೆ ನಡೆದಿದ್ದು. ಶಾಸಕರು ನನ್ನ ಗ್ರಾಮೀಣ ಕ್ಷೇತ್ರದ ನನ್ನ ಉಸಿರೆಂದು ಭಾವಿಸಿ ಅಧಿವೇಶನವನ್ನು ಬಿಟ್ಟು ನೊಂದ ಕುಟುಂಬದ ಯರಗೆರೆ ಗ್ರಾಮಕ್ಕೆ ಭೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿ ಅವರಿಗೆ ಒಂದು ಹೆಣ್ಣು ಮಗುವಿದ್ದು ಆ ಮಗುವನ್ನು ಚೆನ್ನಾಗಿ ನೋಡಿಕೊಳ್ಳಿ ಈ ಹಣವನ್ನು ಮಗುವಿನ ಹೆಸರಿನಲ್ಲಿ ಡೆಪಾಸಿಟ್ ಮಾಡಿಸಿ ಎಂದು ಕುಟುಂಬಸ್ಥರಿಗೆ ತಿಳಿಸಿ ಆ ಕುಟುಂಬಕ್ಕೆ ಈಗಾಗಲೇ ನೀರಾವರಿ ಮಾಡಿಕೊಳ್ಳಲು ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಬೋರ್ವೆಲ್ ಹಾಕಿಸಿ ಕೊಟ್ಟಿದ್ದು.
ಮತ್ತು ಗುಡಿಸಿಲಿನಲ್ಲಿ ವಾಸವಾಗಿರುವ ಕುಟುಂಬವನ್ನು ನೋಡಿ ಈ ಕುಟುಂಬಕ್ಕೆ ನಿವೇಶನ ಮಾಡಿಕೊಳ್ಳಲು ಸೂಚನೆ ನೀಡಿ ಮರಣ ಹೊಂದಿದ ಕುಟುಂಬ 1) ಶ್ರೀಮತಿ ಭವಾನಿ ಗಂ/ನಾಗರಾಜ ಯರಗೇರಾ 5,00000 ಲಕ್ಷ ರೂ ಚೆಕ್ ವಿತರಣೆ ಮಾಡಿದರು.
ಈ ಸಂಧರ್ಭದಲ್ಲಿ ಬ್ಲಾಕ್ ಅಧ್ಯಕ್ಷರು,ಊರಿನ ಹಿರಿಯ ಮುಖಂಡರುಗಳು ಸುತ್ತಮುತ್ತಲಿನ ಗ್ರಾಮಗಳ ಹಿರಿಯ ಮುಖಂಡರುಗಳು, ನಾಮನಿರ್ದೆಶನ ಸದಸ್ಯರುಗಳು ಗ್ರಾ. ಪಂ ಸದಸ್ಯರುಗಳು,ಕಾರ್ಯಕರ್ತರು ಗ್ರಾಮಸ್ಥರು *ಉಪಸ್ಥಿತರಿದ್ದರು.
ವರದಿ: ಗಾರಲ ದಿನ್ನಿ ವೀರನ ಗೌಡ




