ಸಾವಿರಾರು ದೇಶಭಕ್ತರು, ಹೋರಾಟಗಾರರ, ತ್ಯಾಗ, ಬಲಿದಾನದಿಂದ ಲಭಿಸಿರುವ ಸ್ವಾತಂತ್ರ್ಯ ಉಳಿಸಿಕೊಂಡು ಹೋಗುವ ಕರ್ತವ್ಯ ನಮ್ಮೆಲ್ಲರದಾಗಿದೆ’ ಎಂದು ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಹೇಳಿದರು.
ಪಟ್ಟಣದಲ್ಲಿ ಕೆ. ಪಿ.ಎಸ್,ಶಾಲೆಯ ಆವರಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಮಾಡಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರ ಜೀವನದಲ್ಲಿ ಇದೊಂದು ಮಹತ್ತರ ದಿನ ಸುಮಾರು ವರ್ಷಗಳಿಂದ ಬ್ರಿಟಿಷರ ಕಪಿಮುಷ್ಠಿಯಿಂದ ನಲುಗಿದ ನಮ್ಮ ಜನತೆಗೆ
ಗುಲಾಮ ಗುರಿಯಿಂದ ಹೊರಬಂದ ಬಹಳಷ್ಟು ಅಭಿವೃದ್ಧಿಯತ್ತ ದಿನ ಇದು.
ಇಂದಿನ ಯುವ ಜನತೆ ಶೈಕ್ಷಣಿಕ ಅವಧಿಯಲ್ಲಿ ಒಳ್ಳೆಯ ಶಿಕ್ಷಣ ಪಡೆದು ಬ್ರಷ್ಟಚಾರ, ಅಸ್ಪೃಶ್ಯತೆ ನಿರ್ಮೂಲನೆಗಾಗಿ ಶ್ರಮಿಸಬೇಕು ಹಾಗೂ ಯುವ ಪೀಳಿಗೆ ಉತ್ತಮ ಸದಾಶಯಗಳೊಂದಿಗೆ ಸಾಗಬೇಕಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.
ನನಗೆ ಬಾಗೇಪಲ್ಲಿ ಗುಡಿಬಂಡೆ ಹಾಗೂ ಚೇಳೂರು ಮೂರು ತಾಲೂಕುಗಳು ಅಬಿವೃದ್ಧಿ ಮಾಡಬೇಕು ಎಂಬ ಇಚ್ಛೆ ಹಾಗೂ ಅಬಿಮಾನ ಇದೆ.
ಆದರೆ ಕೆಲವು ಪ್ರಚಾರ ಪ್ರಿಯರು ವಿನಾಕಾರಣ ಬಂದು ಪ್ರತಿಭಟನೆ ಮಾಡುವುದು ಬಂದ್ ನಡೆಸುವುದು ಮಾಡುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಾದ್ಯಮದ ಮೂಲಕ ಶಾಸಕರು ಮನವಿ :
ಸಂಸದ ಸುಧಾಕರ್ ರವರೆ ನೀವು ಕೂಡ ನಮ್ಮಂತೆ ಜನಪ್ರತಿನಿಧಿಗಳು ಚೇಳೂರಿನಲ್ಲಿ ಸ್ವಲ್ಪ ಜಾಗ ತೋರಿಸಿ ಪಟ್ಟಣದಲ್ಲಿ ತಾಲೂಕು ಕಚೇರಿ ಮಾಡೋಣ, ಅದು ಬಿಟ್ಟು ನಿಮ್ಮ ಬಟ್ಟರ ಮಾತುಗಳಿಗೆ ಹೆದರೂ ಶಾಸಕ ನಾನಲ್ಲ ಜನರಿಗೆ ದಿಕ್ಕು ತಪ್ಪಿಸುವ ಸಲುವಾಗಿ ಚೇಳೂರು ತಾಲೂಕು ಕಚೇರಿ ಮುಂಭಾಗ ಸರ್ಕಾರಿ ಜಾಗ ಇದೆ ಎಂದು ಹೇಳುವುದು ಸರಿಯಲ್ಲ ಎಂದರು.
ಒಂದು ತಿಂಗಳ ಕಾಲಾವಕಾಶ : ನಿಮಗೆ ಒಂದು ತಿಂಗಳು ಕಾಲಾವಕಾಶ ಕೊಡುತ್ತೇನೆ
ತಾಲೂಕು ಕಚೇರಿ ಎದುರಿಗೆ ೯ ಎಕರೆ ಸರ್ಕಾರಿ ಜಾಗ ಇದೆ ಎಂದು ಹಾಗೂ ಸುತ್ತಮುತ್ತಲೂ ಸರ್ಕಾರ ಜಾಗ ಇದೆ ಎಂದು ಹೇಳಿ ನೀವು ನಿಮ್ಮ ಪ್ರಚಾರಕ್ಕಾಗಿ ಪಾನಿ ಸೃಷ್ಟಿಸಿದ್ದೀರಾ ಅದು ಎಲ್ಲಿ ಅಂತ ತೋರಿಸಿ ಅಲ್ಲಿಯೇ ನಾನು ತಾಲೂಕು ಕಚೇರಿ ಮಾಡೋಣ,ಇಲ್ಲದಿದ್ದರೆ ವಿದಿಯಿಲ್ಲದೆ ಬೇರೆ ಕಡೆ ನಿರ್ಮಾಣ ಮಾಡಲಾಗುವುದು ಎಂದರು.
ನಿಮ್ಮಪ್ಪನ ಜಮೀನು ಇರಬಹುದು ;
ಶಾಸಕರಿಗೆ ಚೇಳೂರು ಹೊರವಲಯದಲ್ಲಿ ಹತ್ತು ಎಕರೆ ಜಾಗ ಇದೆ ಆದ್ದರಿಂದ ಅವರ ಭೂಮಿಯ ಪಕ್ಕದಲ್ಲಿ ತಾಲೂಕು ಕಚೇರಿ ನಿರ್ಮಾಣ ಮಾಡಲು ಹೊರಟಿದ್ದಾರೆ ಎಂದು ಸುಳ್ಳು ಅಪೋಹಗಳು ಸೃಷ್ಟಿಸಿದ್ದಾರೆ ಆದ್ರೆ ಅವು ಸತ್ಯಕ್ಕೆ ದೂರದ ಮಾತು ನನಗೆ ಯಾವುದೇ ಆಸ್ತಿ ಇಲ್ಲಾ ಅವರ ಅಪ್ಪನಿಗೆ ಏನಾದ್ರೂ ಇದ್ರೆ ಇರಬಹುದು ನನಗೆ ಯವುದೇ ರೀತಿಯ ಜಮೀನು ಇಲ್ಲಾ ಎಂದು ಹೇಳಿದರು.
ಕರ್ನಾಟಕ ಪಬ್ಲಿಕ್ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,ಜ್ಞಾನೋದಯ ಶಾಲೆ ವಿದ್ಯಾರ್ಥಿಗಳಿಂದ ಬ್ಯಾಂಡ್ ವಾದ್ಯದೊಂದಿಗೆ ಪಥ ಸಂಚಲನ ನಡೆಯಿತು.ವಿವಿಧ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಳೆದ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಪಟ್ಟಣದ ಮುಖ್ಯ ವೃತ್ತದಲ್ಲಿ ಮದೀನಾ ಮಸೀದಿ ಕಮಿಟಿ ಮತ್ತು ಯುವಕರ ಬಳಗದಿಂದ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಂ ಪಂಚಾಯತಿ ಅಧಿಕಾರಿ ಕೌಸ್ತರ್, ಪಿಡಿಒ ಕೆ ವೆಂಕಟಾಚಲಪತಿ,ಇಓ ರಮೇಶ್,ವೃತ್ತ ನಿರೀಕ್ಷಕ ಜನಾರ್ದನ್,ಜ್ಞಾನೋದಯ ಶಾಲೆಯ ಮುಖ್ಯ ಶಿಕ್ಷಕ ಈಶ್ವರ್ ರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು,ಲೋಕೋಪಯೋಗಿ ಇಲಾಖೆ ಅಧಿಕಾರಿಗಳು,ದಲಿತ ಮುಖಂಡರು,ಗ್ರಾಂ ಪಂಚಾಯತಿ ಅಧ್ಯಕ್ಷರಾದ ಕೌಸ್ತಾರ್, ಜಾಲಾರಿ, ಸುರೇಂದ್ರ, ಕೆಜಿ ವೆಂಕಟರಮಣ, ನಾರಾಯಣಸ್ವಾಮಿ, ಸಾಹುಕಾರ್ ಶ್ರೀನಿವಾಸ್,ಶೇಖರ್ ರೆಡ್ಡಿ ಚಂದ್ರ, ನಯಾಜ್, ಸಾಧಿಕ್ ಸೈಬರ್,ಹಾಗೂ ಸದಸ್ಯರು ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.
ವರದಿ :ಯಾರಬ್. ಎಂ




