ಚಿಟಗುಪ್ಪ:ತಾಲ್ಲೂಕಿನ ಎಲ್ಲಡೆ ಐದು ದಿನಗಳ ಕಾಲ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ತಹಸೀಲ್ದಾರ್ ಮಂಜುನಾಥ ಪಂಚಾಳ ತಿಳಿಸಿದ್ದಾರೆ.
ಈ ಕುರಿತು ಶನಿವಾರ ಪತ್ರಿಕಾ ಪ್ರಕಟಣೆ ನೀಡಿದ ಅವರು,ಮಾಹಾರಷ್ಟ ರಾಜ್ಯದ ಮಂಜ್ರಾ ನದಿಯ ನೀರು ಬಿಟ್ಟಿರುವ ಕಾರಣ ಕರ್ನಾಟಕ ಗಡಿ ಭಾಗದ ಗ್ರಾಮಗಳಲ್ಲಿ ನದಿ,ಹಳ್ಳ,ಕೊಳ್ಳ ತುಂಬಿ ಹರಿಯುವ ಸಾಧ್ಯತೆ ಇರುತ್ತದೆ.ಜೊತೆಗೆ ಐದು ದಿನ ಅಧಿಕ ಮಳೆ ಸುರಿಯುವ ಬಗ್ಗೆ ಹವಾಮಾನ ಇಲಾಖೆಯಿಂದ ಮಾಹಿತಿ ರವಾನಿಸಲಾಗಿದೆ.
ಹೀಗಾಗಿ ಸಾರ್ವಜನಿಕರು ನದಿ,ಹಳ್ಳಗಳ ಕಡೆಗೆ ಹೋಗಬಾರದು ಹಾಗೂ ಹಸು,ಎಮ್ಮ,ಆಡುಗಳಿಗೆ ಹಳ್ಳದ ಕಡೆಗೆ ಬಿಡದಂತೆ ಎಚ್ಚರಿಕೆ ವಹಿಸಿ ತಮ್ಮ ಮನೆಯಲ್ಲಿಯೇ ಉಳಿದುಕೊಳ್ಳುವ ಮೂಲಕ ಮುಂಜಾಗೃತೆ ವಹಿಸಬೇಕು ಎಂದು ತಿಳಿಸಿದ್ದಾರೆ.
ವರದಿ:ಸಜೀಶ ಲಂಬುನೋರ




