
ಚಿಕ್ಕೋಡಿ: ಚಿಕ್ಕೋಡಿಗೆ ಆಗಮಿಸಿದ ರಾಯಣ್ಣನ ಜ್ಯೋತಿಯನ್ನು ಅದ್ದೂರಿಯಾಗಿ ಸ್ವಾಗತಿಸಿಕೊಳ್ಳಲಾಯಿತು.
ರಾಯಣ್ಣನ ಜ್ಯೋತಿಯನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ವಿಧಾನಪರಿಷತ ಸದಸ್ಯ ವಿವೇಕರಾವ ಪಾಟೀಲಯವರು ಸ್ವಾಗತಿಸಿಕೊಂಡರು.ಬಳಿಕ ಕನಕದಾಸರ ಮೂರ್ತಿಗೆ ಗಣ್ಯರು ಮಾರ್ಲಾಪಣೆಯನ್ನು ಮಾಡಿ ನಮನ ಸಲ್ಲಿಸಿದರು.ಬಳಿಕ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಜಿಲ್ಲಾಧ್ಯಕ್ಷ ಸಂತೋಷ ಪೂಜೇರಿ ನೇತೃತ್ವದಲ್ಲಿ ರಾಯಣ್ಣ ಜ್ಯೋತಿಯ ಮೇರವಣಿಗೆ ಡೊಳ್ಳಿನ ವಾದ್ಯಗಳೊಂದಿಗೆ ಚಿಕ್ಕೋಡಿ ಪಟ್ಟಣದದಾದ್ಯಂತ ಸಂಚರಿಸಿತು.
ಇದೇ ಸಂಧರ್ಭದಲ್ಲಿ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಜಿಲ್ಲಾಧ್ಯಕ್ಷ ಸಂತೋಷ ಪೂಜೇರಿ,ಕುರಬ ಸಮಾಜದ ಮಾಜಿ ಅಧ್ಯಕ್ಷ ಶಂಕರ ಅವಾಡಖಾನ ಹಾಗೂ ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ ಕಿತ್ತೂರು ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅವರು ಅವರಿಂದ ಸ್ಫೂರ್ತಿ ಪಡೆದ ಅನೇಕರು ನಂತರ ಹೋರಾಟಗಳಲ್ಲಿ ಕ್ರಿಯಾಶೀಲತೆಯಿಂದ ಪಾಲ್ಗೊಂಡರು.ಸಂಗೊಳ್ಳಿ ರಾಯಣ್ಣ ಅವರ ಶೌರ್ಯ ಎಂದೆಂದಿಗೂ ನೆನೆಪಿಡುವಂಥದ್ದು ಎಂದರು ಹಾಗೂ ಆದಷ್ಟೂ ಚಿಕ್ಕೋಡಿಯಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಆಗಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂತೋಷ ಪೂಜಾರಿ,ಚಂದ್ರಕಾಂತ್ ಹುಕ್ಕೇರಿ, ಸಂಜು ಬಡಿಗೇರ,ಪ್ರತಾಪ್ ಪಾಟೀಲ,ಶಂಕರ್ ಅವಾರ್ಡ್ ಖಾನ, ಶಂಕರ್ ಡಂಗೇರ ಅನಿಲ ನಾವಿ, ಹಾಲಪ್ಪ ಶಿವು ಮದಾಳೆ, ಸಚಿವ ದೊಡ್ಡಮನಿ, ರಫೀಕ ಪಠಾಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ




