ಭಾಲ್ಕಿ: ಪಟ್ಟಣದ ಹಿರಿಯ ಮುತ್ಸದ್ದಿ ಜೆ.ಡಿ.ಎಸ್.ಪಕ್ಷದ ರಾಜ್ಯ ಸಂಚಾಲಕ ಹಾಗೂ ಮಾಜಿ ಪುರಸಭೆ ಅಧ್ಯಕ್ಷ ಸಿದ್ರಾಮಪ್ಪಾ ವಂಕೆ (78) ಶನಿವಾರ ತಡರಾತ್ರಿ ನಿಧನರಾಗಿದ್ದಾರೆ. ಮೃತರು ಓರ್ವಪುತ್ರ, ಐವರು ಪುತ್ರಿಯರು ಅಳಿಯಂದಿರರು ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ರವಿವಾರ ಸಾಯಂಕಾಲ 5.00 ಗಂಟೆಗೆ ಭಾಲ್ಕಿಯ ಅವರ ತೋಟದ ಮನೆಯಲ್ಲಿ ನೆರವೇರಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಮೃತರ ನಿಧನಕ್ಕೆ ಹಿರೇಮಠ ಸಂಸ್ಥಾನದ ಹಿರಿಯ ಸ್ವಾಮೀಜಿ, ನಾಡೋಜ ಡಾ। ಬಸವಲಿಂಗ ಪಟ್ಟದ್ದೇವರು, ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ಭಾತಂಬ್ರಾ ಶ್ರೀಗಳು, ಮಾಜಿ, ಸಚಿವ ಶತಾಯುಶಿ ಭೀಮಣ್ಣಾ ಖಂಡ್ರೆ, ಅರಣ್ಯ ಸಚಿವ ಈಶ್ವರ ಖಂಡ್ರೆ, ಮಾಜಿ ಸಚಿವ ಬಂಡೆಪ್ಪಾ ಖಾಶೆಂಪೂರ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಪ್ರಮುಖರಾದ ಡಿ.ಕೆ.ಸಿದ್ರಾಮ, ಮಾಜಿ ಪುರಸಭೆ ಅಧ್ಯಕ್ಷರಾದ ಕೈಲಾಸನಾಥಮೀನಕೇರೆ, ವಿಶ್ವನಾಥ ಮೋರೆ, ಸಿದ್ರಾಮಪ್ಪಾ ಅಣದೂರೆ, ಶರದ್ ಸಿರಸೆ, ಪತ್ರಕರ್ತರಾದ ಗಣಪತಿ ಬೋಚರೆ, ಅಶೋಕ ರಾಜೋಳೆ, ಜೈರಾಜ ಧಾಬಶೆಟ್ಟಿ, ಪ್ರೊ| ಶಂಭುಲಿಂಗ ಕಾಮಣ್ಣ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿ ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದ್ದಾರೆ.
ವರದಿ: ಸಂತೋಷ ಬಿಜಿ ಪಾಟೀಲ




