ಐಗಳಿ: ಅಥಣಿ ತಾಲೂಕಿನ ಐಗಳಿ ಗ್ರಾಮದ ವೀರ ಯೋಧ ಕಿರಣರಾಜ ತೆಲಸಂಗ (23) ಅವರು ಭಾರತೀಯ ಅಗ್ನಿವೀರ ಸೈನಿಕ ಪಂಜಾಬನ ರೆಜಿಮೆಂಟ್ ನಲ್ಲಿ ಕರ್ತವ್ಯದಲ್ಲಿ ಇದ್ದಾಗಲೆ ಹೃದಯಾಘಾತದಿಂದ ಹುತಾತ್ಮರಾಗಿದ್ದು ಅವನ ತಂದೆ ತಾಯಿ ಇವರ ಕುಟುಂಬಕ್ಕೆ ರವಿವಾರ ಸಂಜೆ ಚಿಕ್ಕೊಡಿ ಲೋಕಸಭಾ ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ ಅವರು ಭೇಟಿ ನೀಡಿ ಸಾಂತ್ವನ ಹೇಳಿದರು. ಚಿಕ್ಕ ವಯಸ್ಸಿನಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸುತ್ತಾ ಜೀವ ನೀಡಿದ ಕಿರಣರಾಜನಿಗೆ ದೇವರು ಅವನ ಆತ್ಮಕ್ಕೆ ಶಾಂತಿ ನೀಡಲಿ ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಕುಟುಂಬಕ್ಕೆ ತಲುಪಿಸಲು ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಗಜಾನನ ಮಂಗಸೂಳಿ ಸದಾಶಿವ ಬೂಟಾಳಿ ರಾವಸಾಬ ಐಹೊಳೆ ಸುನೀತಾ ಐಹೊಳೆ ರಮೇಶ ಸಿಂಧಗಿ ಐಗಳಿ ಗ್ರಾಮದವರಾದ ಬಾಳ ಮುಜಾವರ ಅಪ್ಪಸಾಬ ತೆಲಸಂಗ ಜಗದೇಶ ತೆಲಸಂಗ ಬಂದೇನವಾಜ ಮುಜಾವರ ಸೇರಿದಂತೆ ಮುಂತಾದವರು ಉಪಸ್ಥಿತಿ ಇದ್ದರು.




