Ad imageAd image

ಹ್ಯೂಮರ್‌ ಕ್ರೈಮ್‌ ಥ್ರಿಲ್ಲರ್‌ ಚಿತ್ರಕ್ಕೆ ಸೈ ಎಂದ ಪ್ರೇಕ್ಷಕ

Bharath Vaibhav
ಹ್ಯೂಮರ್‌ ಕ್ರೈಮ್‌ ಥ್ರಿಲ್ಲರ್‌ ಚಿತ್ರಕ್ಕೆ ಸೈ ಎಂದ ಪ್ರೇಕ್ಷಕ
WhatsApp Group Join Now
Telegram Group Join Now

ದಿಗಂತ್ ನಟನೆಯಎಡಗೈಯೇ ಅಪಘಾತಕ್ಕೆ ಕಾರಣಸಿನಿಮಾ ಡಾರ್ಕ್ಹ್ಯೂಮರ್ಕ್ರೈಮ್ಥ್ರಿಲ್ಲರ್ಆಗಿದ್ದು, ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದೆ. ಲೋಹಿತನ ಎಡಗೈನಿಂದಾಗುವ ಅವಾಂತರಗಳು ಕಥೆಗೆ ತೀವ್ರತೆ ನೀಡುತ್ತವೆ. ಸಮರ್ಥ್ ಕಡಕೋಳ್ ನಿರ್ದೇಶನದಲ್ಲಿ, ದಿಗಂತ್ ತಮ್ಮ ತಮಾಷೆಯ ಟೈಮಿಂಗ್ ಮೂಲಕ ಪ್ರೇಕ್ಷಕರನ್ನು ನಗಿಸುತ್ತಾರೆ.

ದಿಗಂತ್ ನಟನೆಯಎಡಗೈಯೇ ಅಪಘಾತಕ್ಕೆ ಕಾರಣಸಿನಿಮಾ ರಿಲೀಸ್ ಆಗಿದೆ. ಚಿತ್ರವನ್ನು ಸಮರ್ಥ್ ಕಡಕೋಳ್ ನಿರ್ದೇಶಿಸಿದ್ದಾರೆ. ಇದೊಂದು ಪಕ್ಕಾ ಡಾರ್ಕ್ಹ್ಯೂಮರ್ಕ್ರೈಮ್ಥ್ರಿಲ್ಲರ್‌. ಆದರೆ ಕ್ರೈಮ್ನಡೆಯೋದಕ್ಕೆ ಕಾರಣ ಮಾತ್ರ ಲೋಹಿತನ ಎಡಗೈ ಮಾಡಿದ ಅವಾಂತರ. ಟೈಟಲ್ ಮತ್ತು ಟ್ರೇಲರ್ ಗಳಿಂದಲೇ ಭಾರಿ ಗಮನ ಸೆಳೆದಿದ್ದ ಸಿನಿಮಾ ರಿಲೀಸ್ ಆಗಿದ್ದು. ಪ್ರೇಕ್ಷಕರನ್ನು ಮನರಂಜಿಸುವಲ್ಲಿ ದಿಗಂತ್ ಯಶಸ್ವಿಯಾಗಿದ್ದಾರೆ.

ಲೋಹಿತ್ ಅಲಿಯಾಸ್ ಲೊಡ್ಡೆ ಲೋಹಿತ್ (ದಿಗಂತ್) ಹುಟ್ಟಿನಿಂದಲೇ ಎಡಚ. ಅಂದರೆ ತನ್ನೆಲ್ಲಾ ಕೆಲಸಗಳಿಗೂ ಮೊದಲು ಎಡಗೈಯನ್ನೇ ಬಳಸುತ್ತಾನೆ. ಎಡಚನಾಗಿರುವುದಕ್ಕೆ ಹುಟ್ಟಿದಾಗಿನಿಂದಲೂ ಒಂದಲ್ಲಾ ಒಂದು ಸಮಸ್ಯೆಗೆ ಲೋಹಿತ್ ಸಿಲುಕಿಕೊಳ್ಳುತ್ತಾನೆ. ಬಾಲ್ಯದಿಂದಲೂ ಆತನನ್ನು ಶಾಲಾ ಶಿಕ್ಷಕರು ಸರಿಪಡಿಸಲು ಪ್ರಯತ್ನಿಸುತ್ತಾರೆ. ಅವನ ಬರೆಯುವ ಕೈಯನ್ನು ಬದಲಾಯಿಸಲು ಯತ್ನಿಸುತ್ತಾರೆ. ಸಂಬಂಧಿಕರು ಅವನನ್ನು ಜ್ಯೋತಿಷಿಗಳ ಬಳಿಗೆ ಕರೆದೊಯ್ಯುತ್ತಾರೆ. ಅವರು ದೋಷವೆಂದು ಭಾವಿಸಿದ್ದನ್ನುಸರಿಪಡಿಸುವಪ್ರಯತ್ನಿಸುತ್ತಾರೆ, ಆದರೆ ಲೋಹಿತ್ ಯಾವಾಗಲೂ ಎಲ್ಲವನ್ನೂ ವಿರೋಧಿಸುತ್ತಲೇ ಬರುತ್ತಾನೆ. ಎಡಚನಾಗಿರುವುದರಿಂದ ಶಾಂತ ಸ್ವಭಾವದವನಾಗಿರುತ್ತಾನೆ ಎಂದು ಹೇಳಲಾಗುತ್ತದೆ. ಆದರೆ ಎಲ್ಲಿಯವರೆಗೆ? ಎಡಗೈ ನಿಂದ ಒಬ್ಬನ ಪ್ರಾಣ ಹೋಗುವವರೆಗೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!