Ad imageAd image

ವಿಶ್ವ ದಾಖಲೆ ಬರೆದ ಶಕ್ತಿ ಯೋಜನೆ : ರಾಮಲಿಂಗಾ ರೆಡ್ಡಿ ಸಂತಸ

Bharath Vaibhav
ವಿಶ್ವ ದಾಖಲೆ ಬರೆದ ಶಕ್ತಿ ಯೋಜನೆ : ರಾಮಲಿಂಗಾ ರೆಡ್ಡಿ ಸಂತಸ
WhatsApp Group Join Now
Telegram Group Join Now

ಬೆಂಗಳೂರು; ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯು ಮಹಿಳಾ ಸಬಲೀಕರಣದ ದಿಟ್ಟ ಹೆಜ್ಜೆಯಾಗಿ ವಿಶ್ವ ದಾಖಲೆಯನ್ನು ಸೃಷ್ಟಿಸಿದೆ.

ಜೂನ್ 11, 2023ರಿಂದ ಜುಲೈ 25, 2025ರವರೆಗಿನ ಅವಧಿಯಲ್ಲಿ 500 ಕೋಟಿಗೂ ಅಧಿಕ ಮಹಿಳೆಯರು ರಾಜ್ಯದ ಸಾರಿಗೆ ಸಂಸ್ಥೆಗಳಾದ KSRTC, BMTC, NWKRTC, ಮತ್ತು KKRTCಯ ಸಾಮಾನ್ಯ ಹಾಗೂ ಎಕ್ಸ್‌ಪ್ರೆಸ್ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ.

ಈ ಸಾಧನೆಯು ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಲ್ಲಿ ಸ್ಥಾನ ಪಡೆದಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಈ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಶಕ್ತಿ ಯೋಜನೆಯು ಮಹಿಳೆಯರಿಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಮತ್ತು ಔದ್ಯೋಗಿಕ ಸಬಲೀಕರಣಕ್ಕೆ ನೆರವಾಗಿದೆ. ಈ ಯೋಜನೆಯಿಂದಾಗಿ ಬೆಂಗಳೂರಿನಲ್ಲಿ 23% ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ 21% ಮಹಿಳಾ ಉದ್ಯೋಗಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ.

ಇದರಿಂದ ರಾಜ್ಯದ ತಲಾದಾಯವೂ ಹೆಚ್ಚಳವಾಗಿದೆ ಎಂದು ‘Sustainable Mobility Network’ನ ಅಧ್ಯಯನ ವರದಿಯು ತಿಳಿಸಿದೆ.

ಈ ಯೋಜನೆಯ ಮೂಲಕ ಮಹಿಳೆಯರು ಶಿಕ್ಷಣ, ಉದ್ಯೋಗ, ಮತ್ತು ವೈಯಕ್ತಿಕ ಕೆಲಸಗಳಿಗಾಗಿ ಸುಲಭವಾಗಿ ಪ್ರಯಾಣಿಸುವಂತಾಗಿದೆ, ಇದು ರಾಜ್ಯದ ಆರ್ಥಿಕತೆಗೂ ಉತ್ತೇಜನ ನೀಡಿದೆ.

ಯೋಜನೆಯ ಯಶಸ್ಸಿನ ಹಿಂದೆ ಸಾರಿಗೆ ಸಂಸ್ಥೆಗಳ ಶ್ರಮವಿದೆ. ಕಳೆದ ಐದಾರು ವರ್ಷಗಳಲ್ಲಿ ಹೊಸ ಬಸ್‌ಗಳ ಸೇರ್ಪಡೆಯಾಗದೆ, ನೇಮಕಾತಿಗಳಿಲ್ಲದೆ, ಸಾಲದ ಸುಳಿಯಲ್ಲಿದ್ದ ಸಾರಿಗೆ ಸಂಸ್ಥೆಗಳು ಈ ಯೋಜನೆಯ ಮೂಲಕ ದಿಟ್ಟ ಹೆಜ್ಜೆ ಇಟ್ಟಿವೆ.

ಎರಡು ವರ್ಷಗಳಲ್ಲಿ 5,800 ಹೊಸ ಬಸ್‌ಗಳ ಸೇರ್ಪಡೆ, 10,000 ಹೊಸ ನೇಮಕಾತಿಗಳು, ಮತ್ತು ಸಾಲ ಪಾವತಿಗಾಗಿ ಸರ್ಕಾರದಿಂದ 2,000 ಕೋಟಿ ರೂ. ಸಹಾಯವು ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಿದೆ. ದೈನಂದಿನ ಪ್ರಯಾಣಿಕರ ಸಂಖ್ಯೆ 85.84 ಲಕ್ಷದಿಂದ 1.17 ಕೋಟಿಗೆ ಏರಿಕೆಯಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಈ ಯೋಜನೆಯು ದೇಶದ ಇತರ ರಾಜ್ಯಗಳಿಗೆ ಮಾದರಿಯಾಗಿದೆ.

ಜುಲೈ 14, 2025ರಂದು 500 ಕೋಟಿ ಪ್ರಯಾಣಿಕರ ಮೈಲಿಗಲ್ಲನ್ನು ಗುರುತಿಸಲು ಸಿದ್ದರಾಮಯ್ಯ ಮತ್ತು ರಾಮಲಿಂಗಾ ರೆಡ್ಡಿ ಅವರು 500ನೇ ಕೋಟಿಯ ಟಿಕೆಟ್‌ನ್ನು ಮಹಿಳಾ ಪ್ರಯಾಣಿಕರಿಗೆ ನೀಡಿದರು.

ವಿಜಯಪುರದ ಒಡಲ ಧ್ವನಿ ಸ್ತ್ರೀ ಸಂಘದ ಮಹಿಳೆಯರು ತಮ್ಮ ಸಾವಯವ ಜೋಳದ ರೊಟ್ಟಿ ಮತ್ತು ಹೋಳಿಗೆಯನ್ನು ಮುಖ್ಯಮಂತ್ರಿಗಳಿಗೆ ಉಡುಗೊರೆಯಾಗಿ ನೀಡಿ, ಯೋಜನೆಯ ಯಶಸ್ಸಿಗೆ ಕೃತಜ್ಞತೆ ಸಲ್ಲಿಸಿದರು.

ಈ ಯೋಜನೆಯ ಯಶಸ್ಸು KSRTC, BMTC, NWKRTC, ಮತ್ತು KKRTCಯ ಆಡಳಿತ ಮಂಡಳಿ, ಅಧಿಕಾರಿಗಳು, ಮತ್ತು ಸಿಬ್ಬಂದಿಗಳ ಶ್ರಮದ ಫಲ. ಕಾರ್ಮಿಕ ಮುಖಂಡರು ಮತ್ತು ಮಾಧ್ಯಮಗಳ ಸಹಕಾರವೂ ಈ ಸಾಧನೆಗೆ ಕಾರ ಣವಾಗಿದೆ.ಈ ಸಾಧನೆಯು ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಲ್ಲಿ ಸ್ಥಾನ ಪಡೆದಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಈ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಶಕ್ತಿ ಯೋಜನೆಯು ಮಹಿಳೆಯರಿಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಮತ್ತು ಔದ್ಯೋಗಿಕ ಸಬಲೀಕರಣಕ್ಕೆ ನೆರವಾಗಿದೆ. ಈ ಯೋಜನೆಯಿಂದಾಗಿ ಬೆಂಗಳೂರಿನಲ್ಲಿ 23% ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ 21% ಮಹಿಳಾ ಉದ್ಯೋಗಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಇದರಿಂದ ರಾಜ್ಯದ ತಲಾದಾಯವೂ ಹೆಚ್ಚಳವಾಗಿದೆ ಎಂದು ‘Sustainable Mobility Network’ನ ಅಧ್ಯಯನ ವರದಿಯು ತಿಳಿಸಿದೆ.

ಈ ಯೋಜನೆಯ ಮೂಲಕ ಮಹಿಳೆಯರು ಶಿಕ್ಷಣ, ಉದ್ಯೋಗ, ಮತ್ತು ವೈಯಕ್ತಿಕ ಕೆಲಸಗಳಿಗಾಗಿ ಸುಲಭವಾಗಿ ಪ್ರಯಾಣಿಸುವಂತಾಗಿದೆ, ಇದು ರಾಜ್ಯದ ಆರ್ಥಿಕತೆಗೂ ಉತ್ತೇಜನ ನೀಡಿದೆ.

ಯೋಜನೆಯ ಯಶಸ್ಸಿನ ಹಿಂದೆ ಸಾರಿಗೆ ಸಂಸ್ಥೆಗಳ ಶ್ರಮವಿದೆ. ಕಳೆದ ಐದಾರು ವರ್ಷಗಳಲ್ಲಿ ಹೊಸ ಬಸ್‌ಗಳ ಸೇರ್ಪಡೆಯಾಗದೆ, ನೇಮಕಾತಿಗಳಿಲ್ಲದೆ, ಸಾಲದ ಸುಳಿಯಲ್ಲಿದ್ದ ಸಾರಿಗೆ ಸಂಸ್ಥೆಗಳು ಈ ಯೋಜನೆಯ ಮೂಲಕ ದಿಟ್ಟ ಹೆಜ್ಜೆ ಇಟ್ಟಿವೆ.

ಎರಡು ವರ್ಷಗಳಲ್ಲಿ 5,800 ಹೊಸ ಬಸ್‌ಗಳ ಸೇರ್ಪಡೆ, 10,000 ಹೊಸ ನೇಮಕಾತಿಗಳು, ಮತ್ತು ಸಾಲ ಪಾವತಿಗಾಗಿ ಸರ್ಕಾರದಿಂದ 2,000 ಕೋಟಿ ರೂ. ಸಹಾಯವು ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಿದೆ. ದೈನಂದಿನ ಪ್ರಯಾಣಿಕರ ಸಂಖ್ಯೆ 85.84 ಲಕ್ಷದಿಂದ 1.17 ಕೋಟಿಗೆ ಏರಿಕೆಯಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಈ ಯೋಜನೆಯು ದೇಶದ ಇತರ ರಾಜ್ಯಗಳಿಗೆ ಮಾದರಿಯಾಗಿದೆ.

ಜುಲೈ 14, 2025ರಂದು 500 ಕೋಟಿ ಪ್ರಯಾಣಿಕರ ಮೈಲಿಗಲ್ಲನ್ನು ಗುರುತಿಸಲು ಸಿದ್ದರಾಮಯ್ಯ ಮತ್ತು ರಾಮಲಿಂಗಾ ರೆಡ್ಡಿ ಅವರು 500ನೇ ಕೋಟಿಯ ಟಿಕೆಟ್‌ನ್ನು ಮಹಿಳಾ ಪ್ರಯಾಣಿಕರಿಗೆ ನೀಡಿದರು.

ವಿಜಯಪುರದ ಒಡಲ ಧ್ವನಿ ಸ್ತ್ರೀ ಸಂಘದ ಮಹಿಳೆಯರು ತಮ್ಮ ಸಾವಯವ ಜೋಳದ ರೊಟ್ಟಿ ಮತ್ತು ಹೋಳಿಗೆಯನ್ನು ಮುಖ್ಯಮಂತ್ರಿಗಳಿಗೆ ಉಡುಗೊರೆಯಾಗಿ ನೀಡಿ, ಯೋಜನೆಯ ಯಶಸ್ಸಿಗೆ ಕೃತಜ್ಞತೆ ಸಲ್ಲಿಸಿದರು.

ಈ ಯೋಜನೆಯ ಯಶಸ್ಸು KSRTC, BMTC, NWKRTC, ಮತ್ತು KKRTCಯ ಆಡಳಿತ ಮಂಡಳಿ, ಅಧಿಕಾರಿಗಳು, ಮತ್ತು ಸಿಬ್ಬಂದಿಗಳ ಶ್ರಮದ ಫಲ. ಕಾರ್ಮಿಕ ಮುಖಂಡರು ಮತ್ತು ಮಾಧ್ಯಮಗಳ ಸಹಕಾರವೂ ಈ ಸಾಧನೆಗೆ ಕಾರಣವಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!