ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದೇಸಾಯರಟ್ಟಿ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಪಾಯಲಿಂಗೇಶ್ವರ ಜಾತ್ರಾ ಮಹೋತ್ಸವವೂ ಸೋಮವಾರದಂದು ಜಾತ್ರೆಯು ವಿಶೇಷ ಪೂಜೆ ಹಾಗೂ ವಿಶೇಷ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರುಗಿತ್ತು.

ಸೋಮವಾರದಂದು ಶ್ರೀ ಪಾಯಲಿಂಗೇಶ್ವರ ದೇವರ ವಿಶೇಷ ಅಭಿಷೇಕ ಹಾಗೂ ಗಂಗೆ ಸ್ಥಾನದೊಂದಿಗೆ ಬಸವೇಶ್ವರ ಸರ್ಕಲ ದಿಂದ ದೇವರ ಪಲ್ಲಕ್ಕಿ ಉತ್ಸವ ವಿವಿಧ ವಾದ್ಯ ಮೇಳದೊಂದಿಗೆ ಹಾಗೂ ಜೋಡಿ ಎತ್ತು ಗಾಡಿ ಹಾಗೂ ಕೋಲು ಕುಣಿದಾಟದೊಂದಿಗೆ ವಿವಿಧ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತ್ತು.
ಈ ಸಂದರ್ಭದಲ್ಲಿ ಜಾತ್ರಾ ಕಮಿಟಿ ಸಮಸ್ತ ದೇಸಾಯರಟ್ಟಿ ಗ್ರಾಮದ ಮುಖಂಡರು ಗ್ರಾಮಸ್ಥರು ಹಾಗೂ ಗುರು ಹಿರಿಯರು ಉಪಸದಿದ್ದರು.
ವರದಿ: ಸುಕುಮಾರ ಮಾದರ




