
ರಾಮದುರ್ಗ: ತಾಲೂಕಿನ ಸುಕ್ಷೇತ್ರ ಸಂಗಳ ಗ್ರಾಮದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಸೋಮವಾರ ವಿಜೃಂಭಣೆಯಿಂದ ಜರುಗಿತು. ಪ್ರತಿ ವರ್ಷದಂತೆ ಈ ವರ್ಷವೂ ದಿನಾಂಕ 17. 8.2025 ರಂದು ರಾತ್ರಿ 8:00ಗೆ ಕಳಸಾರೋಹಣ ನೆರವೇರಿತು, ಬೆಳಿಗ್ಗೆ 6:00ಗೆ ಶ್ರೀ ಬಸವೇಶ್ವರರ ಮೂರ್ತಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಕುಂಕುಮಾರ್ಚನೆ ಮಹಾಮಂಗಳಾರತಿ ನೆರವೇರಿತು.ತದನಂತರ ಮಹಾಪ್ರಸಾದ ಕಾರ್ಯಕ್ರಮ ಜರಗಿತು. ಸಾಯಂಕಾಲ ಶ್ರೀ ಬಸವೇಶ್ವರರ ಪಲ್ಲಕ್ಕಿ ಉತ್ಸವ ನಂದಿ ಕೋಲು ಉತ್ಸವ ಹಾಗೂ ಮಹಾ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.ಗ್ರಾಮದ ಸಮಸ್ತ ಗುರು ಹಿರಿಯರು ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತರು ಮಹಾರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತರು ಉತ್ತತ್ತಿ ಬಾಳೆಹಣ್ಣು ಅರ್ಪಿಸಿ ಪುನೀತರಾದರು.
ವರದಿ: ಕುಮಾರ ಎಂ




