ಚಿಂಚೋಳಿ : ಕಲ್ಬುರ್ಗಿ ಜಿಲ್ಲೆ ,ಚಿಂಚೋಳಿ ತಾಲೂಕಿನ ಸೇಡಂ ವಿಧಾನಸಭಾ ಕ್ಷೇತ್ರದ ಸುಲೇಪೇಟ ಗ್ರಾಮದ ಪೊಲೀಸ್ ಠಾಣೆಯಲ್ಲಿ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಭೆಯನ್ನು ಸುಲೇಪೇಟ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಅಮರ್ ಕುಲಕರ್ಣಿ ನೇತೃತ್ವದಲ್ಲಿ ಶಾಂತಿ ಸಭೆ ಏರ್ಪಡಿಸಲಾಯಿತು.
ಎಲ್ಲಾ ಸಮುದಾಯದ ನಾಯಕರು ಈ ಒಂದು ಶಾಂತಿ ಸಭೆಯಲ್ಲಿ ಭಾಗವಹಿಸಿ ಭಾವೈಕ್ಯದಿಂದ ಹಬ್ಬ ಆಚರಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಧ್ವನಿವರ್ಧಕಗಳನ್ನು ಬಳಸಬೇಕು.ಹಿರಿಯ ನಾಗರಿಕರು,ಮಕ್ಕಳು,ಪ್ರಾಣಿಗಳಿಗೆ ತೊಂದರೆಯಾಗದಂತೆ ಸಾರ್ವಜನಿಕರು ಗಣೇಶ ಮಂಡಳಿಯವರು ಗಮನಹರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಯಾವುದೇ ರೀತಿಯಾಗಿ ಸಾರ್ವಜನಿಕರಿಗೆ ತೊಂದರೆ ಕೂಡದ ಹಾಗೆ ಹಬ್ಬವನ್ನು ಆಚರಣೆ ಮಾಡಬೇಕು ನಮ್ಮ ಇಲಾಖೆ ವತಿಯಿಂದ ಸಂಪೂರ್ಣವಾಗಿ ಬಂದಬಸ್ತ್ ನೀಡುತ್ತೇವೆ ಎಂದು ಹೇಳಿದರು ಎಲ್ಲಾ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಹೇಳಿದರು ಈ ಸಂದರ್ಭದಲ್ಲಿ ಸುಲೇಪೇಟ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಆರಕ್ಷಕ ನಿರೀಕ್ಷಕರಾದ ಅಮರ್ ಕುಲಕರ್ಣಿ. ನಸಿರ್. ರವೀಂದ್ರ.ಸಂತೋಷ್. ಸದ್ದಾಮ್ ಪ್ರಭಾಕರ್. ಮೋಹನ್ ರೆಡ್ಡಿ .ಈಶ್ವರ್.ಮರಗಪ್ಪ.ಜಗದೇವಪ್ಪ ಕಟ್ಟಿಮನಿ.ಬಸವರಾಜ್.ಸುಕ್ಮನಿ.ಅನಿಲ್.ವಿನೋದ್.ಸಿದ್ದು. ಗ್ರಾಮದ ಮುಖಂಡರಾದ.ರುದ್ರಮುನಿ ರಾಮತೀರ್ಥಕರ ಮಲ್ಲಿಕಾರ್ಜುನ್ ಗುಲಗುಂಜಿ ಚಂದ್ ಪಾಷಾ ಮೊಮೀನ್ ಮೋಹಿನ್ ಮೊಮೀನ್ ಲಾಡ್ಲೆ ಸಬ್ ಹಾಗೂ ಸುಲೇಪೇಟ ಗಣೇಶ್ ಮಂಡಳಿಯ ಸರ್ವ ಸಿಬ್ಬಂದಿಗಳು ಹಾಗೂ ಮುಸ್ಲಿಂ ಕಮಿಟಿಯ ಸರ್ವ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ: ಸುನಿಲ್ ಸಲಗರ್




