Ad imageAd image

ರಸ್ತಾ ರೋಖೋ ಚಳುವಳಿ ಪ್ರತಿಭಟನಾ ಮೆರವಣಿಗೆ ಅನುಮತಿಗೆ ಮನವಿ

Bharath Vaibhav
ರಸ್ತಾ ರೋಖೋ ಚಳುವಳಿ ಪ್ರತಿಭಟನಾ ಮೆರವಣಿಗೆ ಅನುಮತಿಗೆ ಮನವಿ
WhatsApp Group Join Now
Telegram Group Join Now

ಸಿರುಗುಪ್ಪ : ನಗರದ ತಹಶೀಲ್ದಾರ್ ಕಛೇರಿಯಲ್ಲಿ ಹದಗೆಟ್ಟಿರುವ ಹೆದ್ದಾರಿಯ ದುರಸ್ತಿಗೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ಹಾಗೂ ರಸ್ತಾ ರೋಖೋ ನಡೆಸಲು ಅನುಮತಿ ನೀಡುವಂತೆ ತಹಶೀಲ್ದಾರರಿಗೆ ಸಿರಸ್ತೆದಾರ ಸಿದ್ದಾರ್ಥ್ ಕಾರಂಜಿ ಅವರ ಮೂಲಕ ಸಮಾನ ಮನಸ್ಕರಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು.

ಮುಖಂಡರಾದ ಗೋಪಾಲಕೃಷ್ಣ ಮಾತನಾಡಿ ಸಾರ್ವಜನಿಕ ಹಿತಾಸಕ್ತಿ ಹಾಗೂ ರಕ್ಷಣೆಯ ದೃಷ್ಟಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ತೀವ್ರ ಹದಗೆಟ್ಟ ರಸ್ತೆಯಲ್ಲಿ ಹೆಚ್ಚಿರುವ ಗುಂಡಿಗಳಿಂದ ಮಳೆಗಾಲದಲ್ಲಿ ನೀರು ತುಂಬಿ ಗುಂಡಿಗಳು ಕಾಣದೇ ಬೈಕ್ ಸವಾರರು ಸಾವು ನೋವುಗಳನ್ನು ಅನುಭವಿಸುತ್ತಿದ್ದಾರೆ.

ಅಲ್ಲದೇ ಹೆಚ್ಚಿದ ದೂಳಿನಿಂದಾಗಿ ಟಿ.ಬಿ. ಅಸ್ತಮಾ, ಕೆಮ್ಮಿನಂತಹ ಅಲರ್ಜಿಯಿಂದ ಬಳಲುವಂತಾಗಿದೆಂದು ವೈದ್ಯರು ಸೂಚಿಸುತ್ತಿದ್ದಾರೆ. ಜನಪ್ರತಿನಿಧಿಗಳು ಗಮನಹರಿಸಿ ಹೆದ್ದಾರಿ ದುರಸ್ತಿ ಮಾಡುವುದರೆಂದು ಇಷ್ಟು ದಿನಗಳ ಕಾಲ ನಾವು ತಾಳ್ಮೆಯಿಂದ ಕಾದೆವು. ಆದರೆ ಯಾವುದೇ ಪ್ರಯೋಜನವಾಗಿಲ್ಲ.

ಆದ್ದರಿಂದ ಆಗಸ್ಟ್ 23, ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಶ್ರೀ ಗಣೇಶ ದೇವಸ್ಥಾನದಿಂದ ಪ್ರತಿಭಟನಾ ಮೆರಣಿಗೆ ಹೊರಟು ನಗರದ ಪ್ರಮುಖ ವೃತ್ತಗಳ ಮುಖೇನ ಹೋಗಿ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ರಸ್ತಾ ರೋಖೋ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದ್ದು, ಅನುಮತಿ ನೀಡುವಂತೆ ಮನವಿ ಸಲ್ಲಿಸಲಾಯಿತೆಂದು ತಿಳಿಸಿದರು.

ಇದೇ ವೇಳೆ ಸಮಾನ ಮನಸ್ಕ ಸಾರ್ವಜನಿಕರಾದ ಎ.ಜೆ.ಮಂಜುನಾಥ, ಬಿ.ಕೆ.ಚನ್ನಬಸವ, ಹೆಗಡೆ ಆನಂದ, ಹೇಮನಗೌಡ, ಪ್ರವೀಣ, ಎಸ್.ಜನಾರ್ಧನಶೆಟ್ಟಿ, ಹನುಮೇಶ, ವಿರುಪಾಕ್ಷಿಸ್ವಾಮಿ, ಮಂಜುನಾಥಗೌಡ, ರಾಜೇಶ್, ನಂದೀಶ ಇನ್ನಿತರರಿದ್ದರು.

ವರದಿ: ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!