Ad imageAd image

ವಿಧಾನಪರಿಷತ್‌ನ ಸದಸ್ಯರಾಗಿ ಹೊರಟ್ಟಿ 45 ವರ್ಷ ಸೇವೆ : ಹಾಡಿ ಹೊಗಳಿದ ಸದಸ್ಯರು 

Bharath Vaibhav
ವಿಧಾನಪರಿಷತ್‌ನ ಸದಸ್ಯರಾಗಿ ಹೊರಟ್ಟಿ 45 ವರ್ಷ ಸೇವೆ : ಹಾಡಿ ಹೊಗಳಿದ ಸದಸ್ಯರು 
WhatsApp Group Join Now
Telegram Group Join Now

ಬೆಂಗಳೂರು: ವಿಧಾನಪರಿಷತ್‌ನ ಸದಸ್ಯರಾಗಿ ಸುದೀರ್ಘ 45 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಹಾಲಿ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮೇಲನೆಯಲ್ಲಿ ಪಕ್ಷಬೇಧ ಮರೆತು ಸದಸ್ಯರು ಹಾಡಿ ಹೊಗಳಿದರು.

ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್‌‍ನ ಮಂಜುನಾಥ ಬಂಡಾರಿಯವರು ಮಂಡಿಸಿದ ಅಭಿನಂದನಾ ಪ್ರಸ್ತಾವನೆಗೆ ಬಿಜೆಪಿ, ಕಾಂಗ್ರೆಸ್‌‍, ಜೆಡಿಎಸ್‌‍ ಸದಸ್ಯರು ಹೊರಟ್ಟಿಯವರ ಸುದೀರ್ಘ ನಾಲ್ಕೂವರೆ ದಶಕಗಳ ಕಾಲದ ಸೇವೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.

ಪ್ರಾರಂಭದಲ್ಲಿ ಮಾತನಾಡಿದ ಕಾಂಗ್ರೆಸ್‌‍ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್‌ರವರು, ನೀವು ಮೊದಲ ಬಾರಿಗೆ ವಿಧಾನಪರಿಷತ್‌ನ ಸದಸ್ಯರಾಗಿ ಆಯ್ಕೆಯಾದ ವೇಳೆ ನಾವು ಆಗಿನ್ನೂ ರಾಜಕೀಯಕ್ಕೆ ಕಾಲಿಟ್ಟಿದ್ದೆವು. ಯುವ ಕಾಂಗ್ರೆಸ್‌‍ ಮೂಲಕ ನಾನು ರಾಜಕೀಯ ಪ್ರವೇಶ ಮಾಡಿದ್ದೆ ಎಂದು ನೆನಪಿಸಿಕೊಂಡರು.

ಶಿಕ್ಷಕರ ಕ್ಷೇತ್ರದ ಮೂಲಕ ಮೇಲನೆಗೆ ಆಯ್ಕೆಯಾಗಿ ಈಗಲೂ ಅದೇ ಕ್ಷೇತ್ರದಿಂದ ಆಯ್ಕೆಯಾಗಿರುವ ನಿಮ ಅನುಭವ ಸಂಸದೀಯ ವ್ಯವಸ್ಥೆ ಬಗ್ಗೆ ತಿಳಿದುಕೊಂಡಿರುವ ಜ್ಞಾನ, ಸದನದಲ್ಲಿ ನಡೆದುಕೊಳ್ಳುವ ರೀತಿ ಸದಸ್ಯರಿಗೆ ತಿಳಿ ಹೇಳುವುದು ತಿಳಿಹೇಳುವುದು ಎಲ್ಲವೂ ಮಾದರಿಯಾಗಿದೆ ಎಂದು ಹಾಡಿಹೊಗಳಿದರು.

ನಿಮಂತಹ ಹಿರಿಯರ ಅನುಭವ ಈ ಸದನಕ್ಕೆ ಈಗಲೂ ಅವಶ್ಯಕತೆ ಇದೆ. ಪಕ್ಷ ಯಾವುದೇ ಇರಲಿ, ಸಿದ್ಧಾಂತ ಏನೇ ಇರಲಿ, ಒಬ್ಬ ಸುದೀರ್ಘ ಅನುಭವ ಹೊಂದಿರುವ ರಾಜಕಾರಣಿಯನ್ನು ಅಭಿನಂದಿಸುವುದು ಭಾರತ ಚರಿತ್ರೆಯಲ್ಲಿ ನಡೆದುಕೊಂಡು ಬಂದಿರುವ ಉದಾಹರಣೆಗಳಿವೆ. ಹೀಗಾಗಿ ಈ ಸದನವು ನಿಮ ಸೇವೆಯನ್ನು ಸದಾ ನೆನಪಿಟ್ಟುಕೊಳ್ಳುತ್ತದೆ ಎಂದರು.

ಮಂಜುನಾಥ ಭಂಡಾರಿ ಮಾತನಾಡಿ, ಓರ್ವ ಜನಪ್ರತಿನಿಧಿ ಸತತ 45 ವರ್ಷಗಳ ಕಾಲ ಸಾರ್ವಜನಿಕ ಜೀವನದಲ್ಲಿರುವುದು ಸಾಮಾನ್ಯ ಮಾತಲ್ಲ. ಅದರಲ್ಲೂ ಒಂದೇ ಕ್ಷೇತ್ರದಿಂದ ಆಯ್ಕೆಯಾಗಿ ಬರುವುದು ಈಗಿನ ವ್ಯವಸ್ಥೆಯಲ್ಲಿ ದುಸ್ಥರದ ಮಾತು.

ಮತದಾರರು ಒಂದು ಬಾರಿ ಆಯ್ಕೆ ಮಾಡಿದರೆ ಮತ್ತೊಂದು ಬಾರಿ ಆಯ್ಕೆ ಮಾಡುವುದೇ ಕಷ್ಟ. ಅಂತಹುದರಲ್ಲಿ 45 ವರ್ಷ ಗೆದ್ದು ಬಂದಿದ್ದೀರಿ ಎಂದರೆ ಅದೊಂದು ದಾಖಲೆಯೇ ಸರಿ ಎಂದು ಹೇಳಿದರು.

18 ಮಂದಿ ಮುಖ್ಯಮಂತ್ರಿಗಳು, 432 ಸಚಿವರು, 5 ಸಾವಿರಕ್ಕೂ ಹೆಚ್ಚು ಶಾಸಕರ ಜೊತೆ ನಿಮಗೆ ಒಡನಾಟವಿದೆ. ನನಗೆ ತಿಳಿದಿರುವ ಪ್ರಕಾರ, ಭಾರತದ ಇತಿಹಾಸದಲ್ಲೇ ಇದು ಸುದೀರ್ಘವಾದ ದಾಖಲೆ ಎಂದು ಬಣ್ಣಿಸಿದರು.

ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ನಿಮ ಪ್ರಾಮಾಣಿಕತೆ, ಸರಳತೆ, ಮತದಾರರು ಇಟ್ಟ ವಿಶ್ವಾಸವೇ ಈ ಸದನಕ್ಕೆ ಆಯ್ಕೆ ಮಾಡಲು ಕಾರಣ. ಯಾವುದೇ ಪಕ್ಷದಲ್ಲಿದ್ದರೂ ನೀವು ಪಕ್ಷಾತೀತವಾಗಿ ನಡೆದುಕೊಂಡಿದ್ದೀರಿ ಎಂದು ಹೇಳಿದರು.

ಇದೇ ವಿಷಯದ ಮೇಲೆ ಸದಸ್ಯರಾದ ಎಚ್‌.ವಿಶ್ವನಾಥ್‌, ಐವಾನ್‌ ಡಿಸೋಜ ಸೇರಿದಂತೆ ಮತ್ತಿತರರು ಮಾತನಾಡಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!