
ಗೋಕಾಕ: ಮಹಾರಾಷ್ಟ್ರ,ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಬೆಳಗಾವಿ ಜಿಲ್ಲೆಯ ಗೋಕಾಕಿನ ಲೊಳಸೂರ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದರಿಂದ ಸಾರ್ವಜನಿಕರಿಗೆ ಮತ್ತು ವಾಹನಗಳ ಸಂಚಾರವನ್ನು ಗೋಕಾಕ ತಾಲೂಕಾಡಳಿತ ನಿಷೇದ ಮಾಡಿದ್ದಾರೆ.
ಹಿಡಕಲ್ ಡ್ಯಾಂನಿಂದ ಘಟಪ್ರಭಾ ನದಿಗೆ 50 ಸಾವಿರ ಕ್ಯೂಸೆಕ್ ನೀರು ಬಡುಗಡೆ ಮಾಡಿದ್ದರಿಂದ ಗೋಕಾಕ ನಗರದ ದನಗಳ ಪೇಟೆಯಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ಅದರ ಪರಿಣಾಮ ಪ್ರವಾಹ ಬೀತಿಯಿಂದ ಸಾರ್ವಜನಿಕರಿಗೆ ಗಂಜಿ ಕೇಂದ್ರಗಳಿಗೆ ಸ್ಥಳಾಂತರಗೊಳ್ಳಲು ನಗರಸಭೆಯವರು ವಿನಂತಿಸಿಕೊಂಡಿದ್ದಾರೆ.
ಮನೋಹರ ಮೇಗೇರಿ




