
ಗೋಕಾಕ :ಎಲ್ಲರೂ ಶಾಂತಿ ಸೌಹಾರ್ದತೆ ಭಕ್ತಿ ಭಾವದಿಂದ ಹಬ್ಬಗಳನ್ನು ಆಚರಿಸಿಬೇಕೆ ಹೊರತು ಸಾರ್ವಜನಿಕರಿಗೆ ತೊಂದರೆ ಮಾಡಿದರೆ ಕಾನೂನು ಸುಮ್ಮನೆ ಇರೊದಿಲ್ಲ ಎಂದು ಗೋಕಾಕ ಗ್ರಾಮೀಣ ಪಿಎಸ್ ಐ ಕೆ,ವಾಲಿಕಾರ ಖಡಕ್ಕಾಗಿ ಹೇಳಿದರು.
ಗೋಕಾಕ ತಾಲೂಕಿನ ಕೊಣ್ಣೂರಿನ ಲಕ್ಷ್ಮೀ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾದ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಆಚರಣೆ ಶಾಂತಿ ಸಭೆಯಲ್ಲಿ ಮಾತನಾಡಿ ಹಬ್ಬಗಳನ್ನು ಎಲ್ಲರೂ ಭಕ್ತಿ ಭಾವದಿಂದ ಶಾಂತಿಯುತವಾಗಿ ಆಚರಿಸಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಡೆದುಕೊಳ್ಳಬೇಕು.

ಯಾವುದೆ ಕಾರಣಕ್ಕೂ,ಯಾರೂ ಕೂಡ ಡಿಜೆ ಹಚ್ಚುವಂತಿಲ್ಲ, ಅದರ ಬದಲಾಗಿ ಬಡ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ನೀಡಿದರೆ ನಿಮ್ಮನ್ನು ಎಲ್ಲರೂ ನೆನೆಸುತ್ತಾರೆ,ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ತಮ್ಮೆಲ್ಲರ ಜವಾಬ್ದಾರಿಯಾಗಿದೆ ಹಾಗೂ ಗಣೇಶನ ವಿಸರ್ಜನೆ ಮಾಡುವ ಮಾರ್ಗವನ್ನು ಪೋಲಿಸರಿಗೆ ಮೊದಲೆ ತಿಳಿಸಿಬೇಕು ನಂತರ ಕುಂಟು ನೇಪ ಹೇಳಿ ಬದಲಾಯಿಸುವಂತಿಲ್ಲ ಎಂದರು.
ಈಗಾಗಲೆ ಹಲವು ಕೀಡಿಗೇಡಿಗಳ ಮಾಹಿತಿಯನ್ನು ಕಲೆ ಹಾಕಿದ್ದೇವೆ ಅಂತವರು ತಮ್ಮ ಉಪಟಳ ತೋರಿಸಿದರೆ ಅಂತವರನ್ನು ಗಡಿಪಾರು ಮಾಡುತ್ತೇವೆಂದು ಖಡಕ್ ಎಚ್ಚರಿಕೆ ನೀಡಿದರು.
ಗಣೇಶ ಮಂಡಳಿಯವರು ಎಲ್ಲ ಇಲಾಖೆಯ ಅನುಮತಿ ಪಡೆದುಕೊಂಡು ಗಣೇಶ ಉತ್ಸವ ಮಾಡಬೇಕು.ರಾತ್ರಿ ಹತ್ತು ಗಂಟೆಯ ನಂತರ ತಾವು ಮಾಡುವ ಕಾರ್ಯಕ್ರಮಗಳು ಮುಗಿಯಬೇಕು,ಯಾವುದೆ ಸಮಸ್ಯೆಗೆ ಅಸ್ಪದ ನೀಡದಂತೆ ಎಚ್ಚರಿಕೆ ನೀಡಬೇಕು, ನಿಮಗೆ ನಾವು ಸಹಕಾರ ಮಾಡಿತ್ತೇವೆ,ನಮಗೆ ನೀವು ಸಹಕಾರ ಮಾಡಿ ಎಂದರು.
ಸ್ಥಳಿಯ ಪುರಸಭೆ ಸದಸ್ಯ ಮಾರುತಿ ಪೂಜೇರಿ ಇವರು ವಿನಾಕಾರಣ ಶಾಸಕರಿಗೆ ನಾವು ಹೇಳಿದ್ದೇವೆಂದು ಹೇಳಿ ಡಿಜೆ ಹಚ್ಚಲಿಕ್ಕೆ ಮುಂದಾಗಬೇಡಿ,
ಮುಂದೆ ಗ್ರಾಮದೇವತೆ ಜಾತ್ರೆ ಬಂದಿದೆ ಈಗಿಂದಲೆ ನಾವು ಕಾನೂನು ಪಾಲಿಸೋಣ ಅದು ನಮಗೆ ಗೌರವ ತರುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು. ಅದರ ಜೊತೆಯಲ್ಲಿ ಆಯೋಜಕರು ಯಾವುದೇ ಸಮಸ್ಯೆಗೆ ಆಸ್ಪದ ನೀಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು ಎಂದರು. ಈ ಸಂದರ್ಭದಲ್ಲಿ ಪುರಸಭೆ ಅದ್ಯಕ್ಷ ವಿನೋದ ಕರನಿಂಗ, ಪಿರೋಜ ಗೌಂಡಿ, ರಾಜು ಪಿರಜಾದೆ,ಸಿಬ್ಬಂದಿಗಳಾದ ನಾಗರಾಜ ದುರದುಂಡಿ, ಹನಮಂತ ಗೌಡಿ ಸೇರಿದಂತೆ ಇನ್ನುಳಿದ ಸಿಬ್ಬಂದಿಗಳು ಮತ್ತು ಗಣೇಶ ಮಂಡಳಿಯ ಸರ್ವ ಸದಸ್ಯರು ಮುಸ್ಲಿಂ ಸಮಾಜದವರು, ಸಾರ್ವಜನಿಕರು ಹಾಜರಿದ್ದರು.
ವರದಿ: ಮನೋಹರ ಮೇಗೇರಿ




