Ad imageAd image

ತಗ್ಗು ಗುಂಡಿಗಳಿಂದ ವಾಹನ ಸಂಚಾರ ಸ್ಥಗಿತ: ಮೋಹನ್ ಚಿನ್ನ ಆಕ್ರೋಶ

Bharath Vaibhav
ತಗ್ಗು ಗುಂಡಿಗಳಿಂದ ವಾಹನ ಸಂಚಾರ ಸ್ಥಗಿತ: ಮೋಹನ್ ಚಿನ್ನ ಆಕ್ರೋಶ
WhatsApp Group Join Now
Telegram Group Join Now

ಕಾಳಗಿ: ತಾಲೂಕಿನ ರಾಜಾಪುರ ರಸ್ತೆ ಸಂಪೂರ್ಣ ಹಾಳಾಗಿದ್ದು, ಕಾಳಗಿ ತಾಲೂಕಿನಿಂದ ಭರತನೂರು ಮತ್ತು ರಾಜಾಪುರ ಮಾರ್ಗವಾಗಿ ಕೋಡದೂರು ಹೋಗುವ ರಸ್ತೆಯ ಮಧ್ಯದಲ್ಲಿ ದೊಡ್ಡ ದೊಡ್ಡ ತಗ್ಗು ಗುಂಡಿಗಳು ಬಿದ್ದು, ಮತ್ತು ಸೇತುವೆ ಮೇಲಚ್ಚಾವಣಿ ದೊಡ್ಡ ಗಾತ್ರದ ಗುಂಡಿ ಬಿದ್ದು ಸಂಪೂರ್ಣ ಹಾಳಾಗಿದ್ದು ಕಂಡು ಬರುತ್ತದೆ, ಸುಮಾರು 3, 4 ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿರುವದರಿಂದ ಸೇತುವೆ ಕುಸಿದು ಬೀಳುವ ಸೂಚನೆಗಳನ್ನು ಕಾಣಿಸುತ್ತಿದೆ, ಅದರ ಸಲುವಾಗಿ ಕಾಳಗಿ ಯಿಂದ ಸಂಚಾರಿಸುತ್ತಿರುವ ಬಸು ಭಾರತನೂರ ರಾಜಪೂರ ಮಾರ್ಗವಾಗಿ ಸಂಚಾರಿಸುವ ಸಾರಿಗೆ ಬಸ್ಸುಗಳು ಸ್ಥಗಿತ ಗೊಂಡಿವೆ,
ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ನಾಲಾದ ಬ್ರಿಜ್ ಸರಿ ಪಡಿಸಬೇಕೆಂದು ತಮ್ಮ ಮಾಧ್ಯಮದ ಮೂಲಕ ಒತ್ತಾಯ ಮಾಡುತ್ತೇವೆ.

ವಾಹನ ಸವಾರಿಗೆ ರಸ್ತೆ ಸುಧಾರಣೆ ಮಾಡಿ ಹಾಗೆ ರಸ್ತೆಯ ಎರಡು ಬದಿಗೆ ಮುಳ್ಳಿನ ಕಂಠಿಗಳು ಬಹಳಷ್ಟು ಬೆಳೆದಿದ್ದು,ಬಸುಗಳಿಗೆ ಬಹಳಷ್ಟು ಅನಾನುಕೂಲತೆ ಆಗುತ್ತಿದ್ದು ತಾವು ಕೂಡಲೇ ಅಧಿಕಾರಿಗಳು ಈ ಕೆಲಸವನ್ನು ಮಾಡಿಸಿ ಸಾರ್ವಜನಿಕರಿಗೆ ರೈತರಿಗೆ ಹೊಲಕ್ಕೆ ಹೋಗಲು ಎತ್ತು ಬಂಡಿಗಳು ಹೋಗಲು ತೊಂದರೆ ಆಗುತ್ತಿದೆ ಮತ್ತು ಭರತನೂರ ರಾಜಪೂರ್ ಸಾರ್ವಜನಿಕರಿಗೆ ಗುಲ್ಬರ್ಗ ಹೋಗಲು ಬಸು ಇಲ್ಲದಿದ್ದಾರೆ ವಿದ್ಯಾರ್ಥಿಗಳಿಗೆ ಕಾಲೇಜು ಹೋಗಲು ಅನಾನುಕೂಲ ಆಗುತ್ತಿದೆ, ತೆಗ್ಗು ಗುಂಡಿಗಳು ಮತ್ತು ಸೇತುವೆ ಸರಿಪಡಿಸಿ ವಾಹನಗಳು ಸಂಚಾರಿಸಲು ಅನುಕೂಲ ಮಾಡಿಕೊಡಬೇಕೆಂದು ಮೋಹನ್ ಚಿನ್ನ ಅಗ್ರಹ

ವರದಿ: ಹಣಮಂತ ಕುಡಹಳ್ಳಿ

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!