—————————————————————-ವಿಜೇತರಿಗೆ ಬಹುಮಾನ ವಿತರಣೆ
ತುರುವೇಕೆರೆ: ಪಟ್ಟಣದ ಪ್ರಿಯಾ ಆಂಗ್ಲ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ವೇಷಭೂಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಶಾಲೆಯ ಅಧ್ಯಕ್ಷ ಎಂ.ಎನ್.ಚಂದ್ರೇಗೌಡ ಮಾತನಾಡಿ, ಧರ್ಮ ಸಂಸ್ಥಾಪನೆಗೆ ವಿಷ್ಣು ಎತ್ತಿದ ಹತ್ತು ಅವತಾರಗಳಲ್ಲಿ ಶ್ರೀಕೃಷ್ಣನ ಅವತಾರವೂ ಒಂದಾಗಿದೆ. ಮಹಾಭಾರತದಲ್ಲಿ ಅಧರ್ಮ ಅಳಿಸಲು ಪಾಂಡವರ ಪರವಾಗಿ ಸಾರಥ್ಯ ವಹಿಸಿದ ಮಹಾತ್ಮ ಎಂದರು.
ಶ್ರೀಕೃಷ್ಣ ರಾಧೆಯ ವೇಷಭೂಷಣ ಸ್ಪರ್ಧೆಯಲ್ಲಿ 80 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ತೀರ್ಪುಗಾರರಾಗಿ ಎಂ.ನರಸಿಂಹಮೂರ್ತಿ, ಶೋಭಾ ಪ್ರಸಾದ್ ಕಾರ್ಯನಿರ್ವಹಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಪುಷ್ಪಲತಾಚಂದ್ರೇಗೌಡ, ಸಹಕಾರ್ಯದರ್ಶಿ ಚೇತನ್, ಮುಖ್ಯೋಪಾಧ್ಯಾಯ ಗೋವಿಂದರಾಜು, ಶಿಕ್ಷಕರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ




