ಹುಕ್ಕೇರಿ: ಶ್ರೀ ಅಡವಿ ಸಿದ್ದೇಶ್ವರ ಮಠದಿಂದ ಬಸವೇಶ್ವರ ಕೋರ್ಟ್ ಸರ್ಕಲ್ಲದವರೆಗೆ ಹುಕ್ಕೇರಿ ತಾಲೂಕಿನ ಎಲ್ಲಾ ಮಠಾಧೀಶರ ನೇತೃತ್ವದಲ್ಲಿ ಹಿಂದೂ ಸಂಘಟನೆಗಳ ವತಿಯಿಂದ ಧರ್ಮಸ್ಥಳ ಕುರಿತು ಅಪಪ್ರಚಾರ ನಡೆಸಿ ಶ್ರೀ ಕ್ಷೇತ್ರಕ್ಕೆ ಕಳಂಕ ತರಲು ಹುಣ್ಣಾರ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮೌನ ಮೆರವಣಿಗೆ ಇದೆ ವೇಳೆ ಜೈನ ಸಮಾಜದ ಮುಖಂಡರಾದ ಮಹಾವೀರ್ ನಿಲಜಗಿ ಹಾಗೂ ಮಠಾಧೀಶರು ಮಾತನಾಡಿ ಎರಡು ವರ್ಷಗಳಿಂದ ನಿರಂತರವಾಗಿ ಕ್ಷೇತ್ರದ ವಿರುದ್ಧ ಅಪಪ್ರಚಾರ ಹಾಗೂ ಷಡ್ಯಂತರ ಮಾಡಲಾಗುತ್ತಿದೆ ಇದರಿಂದ ಭಕ್ತರು ಅಸಮಾಧಾನಗೊಂಡಿದ್ದಾರೆ ದೇಶದ ಪವಿತ್ರ ಪುಣ್ಯ ಕ್ಷೇತ್ರವಾಗಿರುವ ಧರ್ಮಸ್ಥಳವನ್ನು ಅಪವಿತ್ರ ಮಾಡಲು ಹೊರಟಿರುವ ದುಷ್ಟರನ್ನು ಸರಕಾರ ಯಾವುದೇ ಮುಲಾಜಿಗೆ ಒಳಗಾಗಿದೆ ಅಂತವರನ್ನು ಬಂಧಿಸಬೇಕು ಕೆಲವರು ನಿರಂತರವಾಗಿ ಹಿಂದೂ ದೇವಾಲಯ ಹಾಗೂ ಹಿಂದೂಪರ ಹೋರಾಟಗಾರರನ್ನು ತುಳಿಯಲು ಪ್ರಯತ್ನ ಪಡುತ್ತಿದ್ದಾರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಹುಕ್ಕೇರಿ ತಾಲೂಕ ಜೈನ್ ಸಮಾಜದ ಅಧ್ಯಕ್ಷ ಬಾಹುಬಲಿ ನಾಗನೂರಿ ಸೇರಿದಂತೆ ಹುಕ್ಕೇರಿ ತಾಲೂಕಿನ ಎಲ್ಲಾ ಹಿಂದೂಪರ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಜೈನ ಸಮಾಜದ ಮುಖಂಡರು ಮಠಾಧೀಶರು ಪಾಲ್ಗೊಂಡಿದ್ದರು.

ವರದಿ: ಶಾಂತಿನಾಥ್ ಜಿ ಮಗದುಮ್




