Ad imageAd image

ದಶಕಗಳ ಕನಸು ನನಸು, ಒಳ ಮೀಸಲಾತಿ ಜಾರಿಗೆ  ಸಂಭ್ರಮಾಚರಣೆ

Bharath Vaibhav
ದಶಕಗಳ ಕನಸು ನನಸು, ಒಳ ಮೀಸಲಾತಿ ಜಾರಿಗೆ  ಸಂಭ್ರಮಾಚರಣೆ
WhatsApp Group Join Now
Telegram Group Join Now

 

ಮೊಳಕಾಲ್ಮೂರು: ದಶಕಗಳ ಕನಸು ಹಲವಾರು ವರ್ಷಗಳಿಂದ ನಿನಗೊಂದಿಗೆ ಬಿದ್ದಿದ್ದ ಮಾದಿಗರ ಒಳ ಮೀಸಲಾತಿ ಜಾರಿಯಾದ ಹಿನ್ನೆಲೆಯಲ್ಲಿ ಮೊಳಕಾಲ್ಮುರು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಪಟಾಕಿ ಸೇರಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಅಧ್ಯಕ್ಷರಾದ ಎಸ್ ಜಯಣ್ಣ ಮಾತನಾಡಿ, ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇವರನ್ನು ಒಳಗೊಂಡ ಕಾಂಗ್ರೆಸ್ ಸರ್ಕಾರ ಮಾದಿಗರಿಗೆ ಭರವಸೆ ಕೊಟ್ಟಂತೆ ಒಳ ಮೀಸಲಾತಿ ಜಾರಿ ಮಾಡಿದ್ದು ಇಡೀ ಸರ್ಕಾರಕ್ಕೆ ಮತ್ತು ನಮ್ಮ ಕ್ಷೇತ್ರದ ಶಾಸಕರಿಗೆ ಧನ್ಯವಾದಗಳು ತಿಳಿಸುತ್ತೇವೆ, ಅದೇ ರೀತಿ ಜನಸಂಖ್ಯೆ ಅನುಗುಣವಾಗಿ ಎಡಗೈ ಬಲಗೈ ಇನ್ನಿತರೆ ಸಮುದಾಯಕ್ಕೆ ಮೀಸಲಾತಿ ಹಂಚಿಕೆ ಮಾಡಿರುವುದು ತುಂಬಾ ಸಂತೋಷವಾಗಿದೆ.

ನಮ್ಮ ಹಿರಿಯರು ಪ್ರಾಣ ತ್ಯಾಗ ಹೋರಾಟದ ಪ್ರತಿಫಲವೇ ಈಗ ಒಳ ಮೀಸಲಾತಿ ಸಿಕ್ಕಿದೆ. ಇದರ ಸದುಪಯೋಗ ಪಡೆದುಕೊಂಡು ಶಿಕ್ಷಣ ರಾಜಕೀಯ ಇನ್ನು ಇತರೆ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಬೇಕು ಎಂದರು. ಕಾಂಗ್ರೆಸ್ ಸರ್ಕಾರ ಮಾದಿಗರಿಗೆ ಒಳ ಮೀಸಲಾತಿ ನೀಡುತ್ತೇವೆ ಎಂದು ಭರವಸೆ ನೀಡಿ ಅದನ್ನು ಈಡೇರಿಸಿದ್ದಾರೆ ನಮ್ಮ ಸಮಾಜದ ವತಿಯಿಂದ ಕಾಂಗ್ರೆಸ್ ಸರ್ಕಾರಕ್ಕೆ ಅಭಿನಂದನೆಗಳನ್ನು ತಿಳಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ತಾಲೂಕು ಮಾದಿಗ ಸಮುದಾಯದ ಮುಖಂಡರು ಯುವಕರು ಇನ್ನು ಹಲವರು ಪ್ರಸ್ತುತರಿದ್ದರು.

ವರದಿ: ಪಿಎಂ ಗಂಗಾಧರ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!