
ಬೈಲಹೊಂಗಲ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ರಾಜ್ಯ ಹೆದ್ದಾರಿಯಲ್ಲಿರುವ ಹೊಳಿ ಹೊಸೂರ ಗ್ರಾಮದಲ್ಲಿ ಬಸ್ ನಿಲ್ದಾಣದ ತಂಗುದಾಣ ವಿಲ್ಲದೇ ದಿನನಿತ್ಯ ಈ ಕಡೆ ಬೈಲಹೊಂಗಲಕ್ಕೆ ಹಾಗೂ ಆ ಕಡೆ Mk ಹುಬ್ಬಳ್ಳಿಗೆ ಸಂಚಾರ ಮಾಡುವ ಪ್ರಯಾಣಿಕರಿಗೆ ಇಕ್ಕಟ್ಟಾದ ರಸ್ತೆಯ ಎರಡು ಬದಿಯಲ್ಲೇ ನಿಲ್ಲುವ ಪರಿಸ್ಥಿತಿ ಬಂದೊದಗಿದೆ.
ಇನ್ನೊಂದು ಕಡೆ ಈ ರಾಜ್ಯ ಹೆದ್ದಾರಿಯ ಹೊಳಿ ಹೊಸೂರು ರಸ್ತೆಯಲ್ಲಿ ಅಪಘಾತಗಳ ತುಂಬಾನೇ ಜಾಸ್ತಿಯಾಗಿರುವುದರಿಂದ ರಸ್ತೆಯ ಇಕ್ಕೆಲಗಳಲ್ಲಿ ನಿಲ್ಲುವ ಪ್ರಯಾಣಿಕರ ಮೇಲೆ ವಾಹನಗಳು ಬಂದಿರುವ ಪ್ರಸಂಗಗಳು ಇವೆ. ಇನ್ನೂ ಪ್ರಸ್ತುತ ಮಳೆಗಾಲವಾಗಿರುವುದರಿಂದ ಬಸ್ ತಂಗುದಾಣ ಇಲ್ಲದೆಯಿರುವುದರಿಂದ ಮಳೆಯಲ್ಲೇ ಹೆಣ್ಣುಮಕ್ಕಳು, ವಿದ್ಯಾರ್ಥಿಗಳು ಹಾಗೂ ವೃದ್ಧರು ನಿಲ್ಲುವ ಪರಿಸ್ಥಿತಿ ಇದೆ.

ಆದ್ದರಿಂದ ಈ ಗ್ರಾಮದ ಯುವಕರ ಮನವಿ ಮೇರೆಗೆ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಭೇಟಿಕೊಟ್ಟು ಈ ಸಮಸ್ಯೆಯ ಬಗ್ಗೆ ಸಮಗ್ರವಾಗಿ ವರದಿ ತಯಾರಿಸಿ ಬೆಳಗಾವಿ ವಿಭಾಗದ ಸಂಚಾರ ನಿಯಂತ್ರಣ ಅಧಿಕಾರಿಗಳು ಆದ ದೇವಕ್ಕ ನಾಯಕ್ ಅವರ ಗಮನಕ್ಕೆ ತೆಗೆದುಕೊಂಡು ಅಭಿಪ್ರಾಯ ಸಂಗ್ರಹ ಮಾಡಿ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದರೂ ಈ ಹೊಳಿ ಹೊಸೂರ ಗ್ರಾಮಕ್ಕೆ ಹೊಸ ಬಸ್ ತಂಗುದಾಣ ಭಾಗ್ಯ ಸಿಗುವುದೇ ಎಂಬುದನ್ನು ಕಾದುನೋಡಬೇಕಿದೆ.
ವರದಿ: ಬಸವರಾಜು




