———-ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ
ರಾಮದುರ್ಗ: ಧರ್ಮಸ್ಥಳ ಮಂಜುನಾಥೇಶ್ವರ ಹೆಸರನ್ನು ಕೆಡಿಸುವಲ್ಲಿ ನೆಡೆಸಿದ ಹುನ್ನಾರಕ್ಕೆ ಬ್ರೇಕ್ ಹಾಕಿದ್ದು ಶ್ಲಾಘನೀಯ ಎಂದು ಪತ್ರಕರ್ತ ಎಸ್ ಆರ್ ಗುರುಬಸಣ್ಣವರ ಹೇಳಿದರು.
ಅವರು ತಾಲೂಕಿನ ಶಿವಪೇಠ ಗ್ರಾಮದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಆಯೋಜಿಸಿದ್ದ, ಪೌಷ್ಟಿಕ ಆಹಾರ ಮಾಹಿತಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಹಿಂದೂ ಧರ್ಮಕ್ಕೆ ಯಾರು ಮೋಸ ಮಾಡುವರೋ ಅವರು ನಾಶವಾಗುತ್ತಾರೆ ಎಂದು ಹೇಳಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಆರ್ ಕೆ ಕಿಲಬನೂರ ಮಾತನಾಡಿ, ನಿಮ್ಮ ಮಕ್ಕಳನ್ನು ದಷ್ಟಪುಷ್ಟವಾಗಿ ಬೇಳೆಸಿ ಅದಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸಿರಿ ಧಾನ್ಯಗಳನ್ನು ಬಳಸಿ ಎಂದು ಕರೆ ನೀಡಿದರು.

ಈ ತಂಪಾದ ಹವಾಮಾನದಲ್ಲಿ ಹುರಳಿ ಸಂಕಟಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿ ಎಂದು ತಿಳಿಸಿದರು.
ಮಕ್ಕಳನ್ನು ತಮ್ಮ ಜೊತೆಯಲ್ಲೇ ಕುಳ್ಳಿಸಿಕೊಂಡು ಊಟ ಮಾಡಿ ಅದರಿಂದ ಅವರಿಗೆ ಕುರಕುರಿ ಅಂತಹ ಪದಾರ್ಥಗಳನ್ನು ತಿನ್ನಲು ತಪ್ಪಿಸಿ, ಅದರಿಂದ ಮಕ್ಕಳು ಶುದ್ಧವಾದ ಆಹಾರವನ್ನು ತಿನ್ನಿಸುವುದರಿಂದ ದಷ್ಟ-ಪುಷ್ಟವಾಗಿ ಬೇಳೆಸಲು ಸಹಾಯಕಾರಿ ಆಗುತ್ತದೆ ಎಂದು ತಿಳಿಸಿದರು.
ಅತಿಥಿ ಶಿಕ್ಷಕರಾದ ಸಂತೋಷ ಗಣಮುಖಿ ಮಾತನಾಡಿ, ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ವಲಯ ಮೇಲ್ವಿಚಾರಕ ಸಂತೋಷ ಮಾತನಾಡಿ, ಜ್ಞಾನ ವೀಕಾಸ ಕಾರ್ಯಕ್ರಮವನ್ನು ನಿಮಗೆಲ್ಲರಿಗೂ ಸಹಾಯಕಾರಿಯಾಗುವಂತೆ ಮಾಡಿದ್ದನ್ನು ಸದುಪಯೋಗ ಪಡೆಸಿಕೊಳ್ಳಿ ಎಂದು ಹೇಳಿದರು.
ವೇದಿಕೆಯ ಮೇಲೆ ಅವರಾದಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶಿವಮೂರ್ತೆಪ್ಪ ಗುರುಬಸಣ್ಣವರ, ನಾಗಪ್ಪ ಗಣಮುಖಿ, ಶಿವಲಿಂಗಪ್ಪ ಬೇವಿನಮರದ, ಆರೋಗ್ಯ ಇಲಾಖೆ ಸಿಬ್ಬಂದಿ ಅಶೋಕ ತಿಮ್ಮಾಪೂರ ಇದ್ದರು.
ಪೌಷ್ಟಿಕ ಆಹಾರವನ್ನು ತಯಾರಿತಯಾರಿಸಿದ ಗುಂಪುಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಜ್ಞಾನವಿಕಾಸ ಸಮನ್ವಯ ಅಧಿಕಾರಿ ಸುನಿತಾ ಬಡಿಗೇರ ನಿರೂಪಿಸಿ, ಸ್ವಾಗತಿಸಿದರು. ಗಿರಿಜಾ ಗಾಳಿ ವಂದಿಸಿದರು.
ಗೋಬಿ ಮಂಚುರಿ ಅಂತಹ ಕೆಮಿಕಲ್ ಯುಕ್ತ ಪದಾರ್ಥಗಳನ್ನು ಮಾರಾಟ ಮಾಡುವ ಅಂಗಡಿಗಳಲ್ಲಿ ಬಳಸುವುದನ್ನು ಸರ್ಕಾರ ನಿರ್ಭಂದಿಸಿದೆ ನಾವು ಅಂತಹ ಅಂಗಡಿಕಾರರ ಮೇಲೆ ಕ್ರಮ ಜರುಗಿಸುತ್ತೇವೆ.
-ಡಾ.ಆರ್ ಕೆ ಕಿಲಬನೂರ, ಪ್ರಾ.ಆ.ಕೇಂದ್ರ ಶಿವಪೇಠ-ಸುರೇಬಾನ




