
ಬಾಗಲಕೋಟ: ಜಿಲ್ಲೆ ಬೀಳಗಿ ತಾಲೂಕಿನ ಗಲಗಲಿ ಗ್ರಾಮದ ಸುತ್ತ ಮುತ್ತಲಿನ ರಸ್ತೆಯ ಪಕ್ಕದಲ್ಲಿ ಇಂಡಿಪೆಂಡಂಟ್ ಕಂಪನಿಯ ಕಾಲಿಯಾಗಿ ಬೀದಿರುವ ನೀರಿನ ಬಾಟಲಿಗಳ ಮೇಲೆ ದೇಶದ ತ್ರಿವರ್ಣ ಧ್ವಜದ ಬಣ್ಣ ಹೊಂದಿರುವ ಸ್ಟಿಕರ್ ಗಳನ್ನು ಕಂಡು ಬಾಟಲ್ ಗಳನ್ನು ಸಂಗ್ರಹಿಸಿ ಅದರಲ್ಲಿರುವ ಸ್ಟಿಕರನ್ನು ತಗೆದು ಸಂಗ್ರಹಿಸಿ ಅವರ ಕಂಪನಿಗಳಿಗೆ ಕಳಿಸುತ್ತೇವೆ. ಮತ್ತು ಕಂಪನಿಯವರು ಬಾಟಲಿಗಳ ಮೇಲೆ ದೇಶದ ದ್ವಜದ ಬಣ್ಣ ಹಾಕಿ ಅಗೌರವ ಆಗುವಂತ ಸನ್ನಿವೇಶ ಆಗಿದೆ. ಭಾರತೀಯರಾದ ನಾವು ಖಂಡಿಸಬೇಕು ನಮ್ಮ ಭಾರತದ ಭಾವುಟಕ್ಕೆ ಅದರದೆ ಆದ ಸ್ಥಾನಮಾನ ಹೊಂದಿದೆ ಅದು ನಮ್ಮ ಕರ್ತವ್ಯ ಅದನ್ನು ಎಲ್ಲರು ಪಾಲಿಸಿ ಅದರ ಮೇಲೆ ಹಾಕಿರುವ ಬಣ್ಣ ತಗೆಯಬೇಕು ಒತ್ತಾಯಿಸಿದರು.
ಈ ಸಮಯದಲ್ಲಿ ರಾಜು ಸುತಗುಂಡಿ ಉಪಾಧ್ಯಕ್ಷರು ಅಂಬೇಡ್ಕರ ತರುಣ್ ಸಂಘ ಗಲಗಲಿ . ಶಿವಾನಂದ ಗಲಿಗಲಿ,ಗ್ರಾಮ ಪಂಚಾಯತ್ ಸದಸ್ಯರು, ಅಯುಬ ಶೇಖ.ರಾಜ್ಯ ಉಪಾಧ್ಯಕ್ಷರು ಕರ್ನಾಟಕ ವಿಶ್ವ ನಿರ್ಮಾಣ ಸೇನೆ, ಪ್ರವೀಣ್ ಛಲವಾದಿ.ಅಂಬೇಡ್ಕರ ಸೇನೆ ತಾಲೂಕ ಅಧ್ಯಕ್ಷರು ಬೀಳಗಿ, ಪ್ರಶಾಂತ ಕೋಳಿ ರವಿ ಛಲವಾದಿ ಸುಧೀರ್ ಜಾಧವ್ ಹಜರತ್ ಶೇಕ್ ಮತ್ತು ಗ್ರಾಮದ ಯುವಕರು ಭಾಗಿಯಾದರು
ವರದಿ: ಬಂದೇನವಾಜ ನದಾಫ




