ಮೊಳಕಾಲ್ಮೂರು: ಸಮಾಜನಾ ಪರಿವರ್ತನಾ ವೇದಿಕೆ ಮತ್ತು ವಿವಿಧ ಪ್ರಗತಿಪರ ಸಂಘಟನೆಗಳಿಂದ ವರ್ಷಿತಾಳ ಕೊಲೆ ಖಂಡಿಸಿ ಪ್ರತಿಭಟನೆ ಮಾಡಿ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮಾಜ ಪರಿವರ್ತನಾ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಮೇಶಿ ಮಾತನಾಡಿ ಹಿರಿಯೂರು ತಾಲೂಕಿನ ಹೈಮಂಗಳ ಹೋಬಳಿ ವ್ಯಾಪ್ತಿಯ ಕೋವರಹಟ್ಟಿ ಗ್ರಾಮದ ತಿಪ್ಪೇಸ್ವಾಮಿ ಮತ್ತು ಜ್ಯೋತಿಯವರ ಮಗಳಾದ ವರ್ಷಿತ 19 ವರ್ಷ ಮಹಿಳಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು ಆದರೆ ಕಿಡಿಗೇಡಿಗಳು ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಧಾರಣವಾಗಿ ಕೊಲೆ ಮಾಡಿರುವ ಘಟನೆ, ಮೇಲ್ನೋಟಕ್ಕೆ ಸಾಬೀತಾಗಿದೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಕಿಡಿಗೇಡಿಗಳು ತಕ್ಷಣವೇ ಬಂಧಿಸಬೇಕು ಸೂಕ್ತ ತನಿಖೆ ನಡೆಸಿ ಗಿಣಿಗೇರಿಗಳ ಎಷ್ಟೇ ಬಲೆಡ್ಡರಾಗಿದ್ದರು ಅಪರಾಧಿಗಳಿಗೆ ಕಾನೂನು ಮುಖಾಂತರ ಎಡಿಮುರಿ ಕಟ್ಟಬೇಕು, ಸರ್ಕಾರ ಕುಟುಂಬಕ್ಕೆ ಒಂದು ಕೋಟಿಯಷ್ಟು ಪರಿಹಾರವನ್ನು ಒದಗಿಸಬೇಕು ಅದೇ ರೀತಿ ಸೂಕ್ತ ಭದ್ರತೆ ವಹಿಸಬೇಕು ವರ್ಷಿತಾಳ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಕಲ್ಪಿಸಿ ಕೊಡಬೇಕು ಎಂದು ಒತ್ತಾಯಿಸಿದರು..
ಸರ್ಕಾರವು ಇದರ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳಬೇಕು ಪ್ರತಿನಿತ್ಯ ಪ್ರತಿಕ್ಷಣವೂ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಶೋಷಣೆ ಅತ್ಯಾಚಾರಗಳು ನಡೆಯುತ್ತಿದ್ದು ನಾವು ನಾಗರಿಕ ಸಮಾಜದಲ್ಲಿ ತಲೆತಗ್ಗಿಸುವಂತಹ ಪ್ರಸಂಗ ನಡೆಯುತ್ತಿದೆ, ಇದರ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ದಲಿತ ಮುಖಂಡರಾದ ಕರಿಬಸಪ್ಪ ಮಾತನಾಡಿ ವರ್ಷಿತಾಳಿಗೆ ನ್ಯಾಯ ಸಿಗುವವರೆಗೂ ನಾವು ಬಿಡುವುದಿಲ್ಲ ವರ್ಷಿತಾಳನ್ನು ನೋಡಲು ಆಗದ ಸ್ಥಿತಿಗೆ ತಿಳಿ ಗಿರಿಗಳು ಮಾಡುತ್ತಿದ್ದಾರೆ ಇಂತಹ ಕಿಡಿಗೇಡಿಗಳಿಗೆ ಗಲ್ಲು ಶಿಕ್ಷೆ ಆಗಬೇಕು, ವಶಿತಾಳ ಕುಟುಂಬಕ್ಕೆ ಸರ್ಕಾರ ಪರಿಹಾರ ಈ ಕೂಡಲೇ ಘೋಷಿಸಬೇಕು ಎಂದರು.
ಈ ಸಂದರ್ಭದಲ್ಲಿ ರುದ್ರಯ್ಯ ಕಾಡಪ್ಪ ಹೋಬಣ್ಣ ಪರಮೇಶಿ ಮರಿಸ್ವಾಮಿ ಕಾಡಪ್ಪ ಓಬಣ್ಣ ತಿಪ್ಪೇಸ್ವಾಮಿ ಇನ್ನೂ ಹಲವು ಮುಖಂಡರು ವಿದ್ಯಾರ್ಥಿನಿಯರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಪಿ.ಎಂ. ಗಂಗಾಧರ




