
ನಿಪ್ಪಾಣಿ: ತಾಲೂಕಿನ ಬೇಡಕಿಹಾಳ ಗ್ರಾಮದಲ್ಲಿ ಕಳೆದ ಎರಡು ಮೂರು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮದ ಸಿದ್ದೇಶ್ವರ ಕೆರೆಯ ಹತ್ತಿರವಿರುವ ನಿತಿನ್ ಜಠಾರ್ ಅವರ ಮನೆ ಹಿಂಬದಿಯ ಗೋಡೆ ಕುಸಿದಿದ್ದರಿಂದ ಪಾಳು ಬಿದ್ದ ಬಾವಿಯಲ್ಲಿ ಮಹಿಳೆ ಬಿದ್ದು ಗಾಯಗೊಂಡ ಘಟನೆ ಬುಧವಾರ ಸಂಭವಿಸಿದೆ.
ಬೆಳಿಗ್ಗೆ ಮಾಧುರಿ ನಿತಿನ್ ಜಟಾರ್ ಇವರು ಗೋಡೆ ಪಕ್ಕಕ್ಕೆ ಕುಳಿತು ಪಾತ್ರೆ ತೊಳೆಯುತ್ತಿರುವಾಗ ಅನಿರೀಕ್ಷಿತವಾಗಿ ಗೋಡೆ ಕುಸಿದಿದ್ದರಿಂದ ಗೋಡೆಯ ಜೊತೆಗೆ ಪಾಳು ಬಿದ್ದ ಬಾವಿಗೆ ಮಹಿಳೆ ಕುಸಿದು ಬಿದ್ದಿದ್ದರಿಂದ ಗಾಯಗೊಂಡಿದ್ದಾಳೆ. ಘಟಣೆ ಸಂಭವಿಸುತಿದ್ದಂತೆ ಪಕ್ಕದ ಮನೆಯವರಿಗೆ ಗೊತ್ತಾಗುತ್ತಿದ್ದಂತೆ ಪರಿಸರದ ಜನರು ಕೂಡಿ ಬಾವಿಗೆ ಬಿದ್ದ ಮಹಿಳೆಯನ್ನು ಹೊರತೆಗೆದಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಮಹಿಳೆಯ ಕೈಗೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ಅವರನ್ನು ಖಾಸಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ನಿತಿನ್ ಜಟಾರ್ ಅವರ ಮನೆಯಲ್ಲಿಯ ಜೀವನಾವಸ್ಯಕ ವಸ್ತುಗಳು ನಾಶಗೊಂಡಿದ್ದರಿಂದ ಹಾನಿಗೊಳಗಾಗಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಾನಂದ ಬಿಜಲೆ,ಗ್ರಾಮ ಲೆಕ್ಕಾಧಿಕಾರಿ ಸಂಜಯ್ ನೇಮಣ್ಣವರ್ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಶಾಂತ ಪಾಟೀಲ್ ಪಿಂಟು ಅರಗೆ ಉಮೇಶ್ ಕೋಳಿ, ಸಚಿನ್ ಪಾಟೀಲ್ ಪಿಡಿಓ ಪ್ರಕಾಶ್ ಪ್ರಕಾಶ ಧನಗರ, ಶಿವಾನಂದ ಶೆಟ್ಟಿ, ಹಾಗೂ ಕುಮಾರ ಶಾಸ್ತ್ರಿ ಉಪಸ್ಥಿತರಿದ್ದರು.
ಮಹಾವೀರ ಚಿಂಚಣೆ




